ಮಡಿಕೇರಿ, ಏ. 12: ಇಂದು ಸಂಜೆಗತ್ತಲೆ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ ಭಾರೀ ಗುಡುಗು ಸಿಡಿಲು ಸಹಿತ ಮಳೆಯಾಯಿತು. ಸುಮಾರು 20 ನಿಮಿಷ ನಿರಂತರ ಮಳೆ ಸುರಿಯುವರೊಂದಿಗೆ ಭುವಿ ತಂಪಾಯಿತು. ಮಡಿಕೇರಿ ಸನಿಹದ ಕರ್ಣಂಗೇರಿ ಬಳಿ ಬೃಹತ್ ಮರವೊಂದು ವಿದ್ಯುತ್ ಕಂಬ ಸಹಿತ ಧರೆಗುರುಳಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು ಅಲ್ಲದೆ ನಾಪೋಕ್ಲು, ಕುಶಾಲನಗರ, ಸುಂಟಿಕೊಪ್ಪ (ಮೊದಲ ಪುಟದಿಂದ) ಮುಂತಾದೆಡೆಯು ಇದೇ ವೇಳೆ ಗುಡುಗು ಸಹಿತ ಮಳೆಯಾಗಿದೆ. ಕಳೆದೆರಡು ದಿನಗಳಿಂದ ಈ ರೀತಿ ಮಳೆಯಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಇದೇ ಪ್ರಥಮ ಮಳೆಯಾಗಿದ್ದು, ಮಳೆ-ಗಾಳಿಯ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿವೆ. ಅಲ್ಲಿನ ಮದರಸವೊಂದರಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಅಳವಡಿಸಿದ್ದ ಶಾಮಿಯಾನ ಹಾರಿ ಹೋಗಿದ್ದು, ಅಕ್ಕ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ನೆಲ್ಲಕುರುಳಿವೆ. ರಾಜ್ಯ ಹೆದ್ದಾರಿಯಲ್ಲೂ ಆನೆ ಕಾಡುವಿನಿಂದೀಚೆಗೆ ಮರದ ರೆಂಬೆಗಳು ರಸ್ತೆಗುರುಳಿ ಸಂಚಾರಕ್ಕೆ ತೊಡಕುಂಟಾಗಿವೆ. ಕರಿಕೆ ವ್ಯಾಪ್ತಿಯಲ್ಲಿಯೂ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಹಗಲಿನಲ್ಲಿ ಬಿಸಿಲಿನ ತಾಪದೊಂದಿಗೆ ಸಂಜೆಯ ಮಳೆಯು ತಣ್ಣನೆಯ ವಾತಾವರಣ ಮೂಡಿಸಿತು. ರಸ್ತೆ ಹಾಗೂ ಚರಂಡಿಗಳಲ್ಲಿ ಅರೆಕ್ಷಣ ನೀರಿನ ಕೋಡಿ ಹರಿಯುವಂತಾಯಿತು.