ಚೆಟ್ಟಳ್ಳಿ, ಏ. 12: ಕುಲ್ಲೇಟಿರ ಕುಟುಂಬ ಈ ವರ್ಷದ ಕೊಡವ ಹಾಕಿ ಹಬ್ಬವನ್ನು ಶಿಸ್ತು ಬದ್ಧವಾಗಿ ಆಚರಿ ಸಲು ಶ್ರಮಿಸು ತ್ತಿದ್ದಾರೆ, ಯುವ ಕಲಾವಿದ ರೂಪೇಶ್ ನಾಣಯ್ಯ ತನ್ನ ಕುಂಚದಲ್ಲಿ ಕುಲ್ಲೇಟಿರ ಕುಟುಂಬದ ಕಾರೋಣ ಕುಲ್ಲೇಟಿರ ಪೊನ್ನಣ್ಣ ಹಾಗೂ ಕುಲ್ಲೇಟಿರ ಮಾಣಿಚ ಕುಟುಂಬದವರ ಹಾಗೂ ಹಿರಿಯ ಸಾಹಿತಿಗಳ ಕಲ್ಪನೆಗಳೊಂದಿಗೆ ಅದ್ಭುತವಾದ ತೈಲ ವರ್ಣ ಚಿತ್ರವನ್ನು ಬಿಡಿಸುವದರ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪಡೆಬೀರ ಎನಿಸಿಕೊಂಡು ಕುಲ್ಲೇಟಿರ ಕುಟುಂಬಕ್ಕೆ ಕಿರೀಟ ಪ್ರಾಯರಾಗಿದ್ದಾರೆ. ಆದರೆ ಇವರ ಫೋಟೋ ್ಲಇಲ್ಲವೇ ಇಲ್ಲ. ಕುಲ್ಲೇಟಿರ ಕುಟುಂಬದ ತೀರ್ಮಾನದಂತೆ ಪೊನ್ನಣ್ಣ ಹಾಗೂ ಮಾಣಿಚರವರ ಕಲ್ಪನೆಯ ಚಿತ್ರವನ್ನು ಬಿಡಿಸಲು ಕಲಾವಿದರನ್ನು ಹುಡುಕುತ್ತಿದ್ದಾಗ ಕಲ್ಪನಿಕ ಚಿತ್ರ ಬಿಡಿಸುವಲ್ಲಿ ನುರಿತ ಹಾಗೂ ಪ್ರಶಸ್ತಿ ಪಡೆದಿರುವ ಮರಗೋಡುವಿನ ಚಿತ್ರ ಕಲಾವಿದ ಐಮಂಡ ರೂಪೇಶ್ ನಾಣಯ್ಯ 3 ರಿಂದ 5 ದಿನಗಳಲ್ಲಿ ಕುಲ್ಲೇಟಿರ ಕುಟುಂಬದವರ ಕಲ್ಪನೆಯಂತೆ ಪೊನ್ನಣ್ಣ ಹಾಗೂ ಮಾಣಿಚರವರ ತೈಲ ವರ್ಣಚಿತ್ರವನ್ನು ಪೂರ್ತಿಗೊಳಿಸಿದ ತೃಪ್ತಿ ವ್ಯಕ್ತಪಡಿಸಿದ್ದಾರೆ.