ಮಡಿಕೇರಿ, ಏ. 12: ಎಲ್ಲೆಡೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗುತ್ತಿದ್ದರೆ, ಕೂಡ್ಲೂರು - ಚೆಟ್ಟಳ್ಳಿ ಅಂಗನವಾಡಿ ಕಾರ್ಯಕರ್ತೆ ಕೆಲವರ ಹೆಸರನ್ನು ಉದ್ದೇಶಪೂರ್ವಕ ಅಳಿಸಿ ಹಾಕಿಸುತ್ತಿದ್ದಾರೆ ಎಂದು ಸಿ.ಪಿ.ಐ.ಎಂ.ನ ಮಹೇಶ್ ಹಾಗೂ ಕಾಂಗ್ರೆಸ್ನ ಪಪ್ಪು ತಿಮ್ಮಯ್ಯ ಆರೋಪಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ರಾಜಕೀಯ ಪಕ್ಷವೊಂದರ ನೆರಳಿನಲ್ಲಿ ತನಗೆ ಬೇಕಾದಂತೆ ವರ್ತಿಸುತ್ತಿರುವದಾಗಿ ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಂಡನೆ: ಚುನಾವಣಾಧಿಕಾರಿಗಳ ನಿರ್ದೇಶನದಂತೆ ತಾವು ಕಾಂಗ್ರೆಸ್ ಪಕ್ಷದಿಂದ ಮತಗಟ್ಟೆಗಳಿಗೆ ಏಜೆಂಟರನ್ನು ನಿಯೋಜಿಸಿದ್ದು, ಕೂಡ್ಲೂರು - ಚೆಟ್ಟಳ್ಳಿ ಮತಗಟ್ಟೆಗೆ ಕಾಂಗ್ರೆಸ್ ನಿಯೋಜಿಸಿದ್ದ ಮಣಿಕಂಠ ಅವರನ್ನು ಹೊರಗೆ ಕಳುಹಿಸಿರುವದು ಖಂಡನೀಯ ಎಂದು ರಾಜೀವ್ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಯೋಜಕ ತೆನ್ನಿರ ಮೈನಾ ಟೀಕಿಸಿದ್ದಾರೆ.