ಕೂಡಿಗೆ, ಏ. 12: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ್ಕೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಇತ್ತೀಚೆಗೆ ಕಾವೇರಿ ನದಿಯಿಂದ ಪೈಪ್‍ಲೈನ್ ಅಳವಡಿಸಿ ನೀರೊದಗಿಸುವ ಯೋಜನೆ ಕೈಗೊಂಡಿತ್ತು. ನಿನ್ನೆ ರಾತ್ರಿ ಕಾವೇರಿ ನದಿ ದಡದಿಂದ ಅಳವಡಿಸಿದ್ದ ಮೋಟರ್ ವಿದ್ಯುತ್‍ನ 100 ಮೀ. ಕೇಬಲ್ ಅನ್ನು ಕಿಡಿಗೇಡಿಗಳು ಕಳವು ಮಾಡಿದ್ದು, ಪೈಪ್‍ಗಳನ್ನು ಒಡೆದು ಹಾನಿ ಮಾಡಿದ್ದಾರೆ.

ಈ ಬಗ್ಗೆ ಮುಳ್ಳುಸೋಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಅವರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.