ಕೈಗಾರಿಕಾ ಉತ್ಪನ್ನ ಬೆಳವಣಿಗೆ ಏರಿಕೆ ನವದೆಹಲಿ, ಏ. 12: ಭಾರತೀಯ ಕೈಗಾರಿಕೋತ್ಪಾದನೆ ಕ್ಷೇತ್ರವು ಸತತ ನಾಲ್ಕನೇ ಮಾಹೆಯಲ್ಲಿಯೂ ಉತ್ತಮ ಬೆಳವಣಿಗೆ ದಾಖಲಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಕೈಗಾರಿಕಾ ಉತ್ಪನ್ನ ಬೆಳವಣಿಗೆ ದರ ಶೇ.7.1ನ್ನು ತಲಪಿದೆ. ಪ್ರಮುಖವಾಗಿ ಉತ್ಪಾದನಾ ವಲಯದಲ್ಲಿ ದೃಢವಾದ ಕಾರ್ಯನಿರ್ವಹಣೆ, ಬಂಡವಾಳ ಹೂಡಿಕೆ, ಸರಕುಗಳು ಗ್ರಾಹಕರಿಗೆ ಸಕಾಲಕ್ಕೆ ಸರಬರಾಜಾಗುವ ಕಾರಣ ಹೆಚ್ಚಿನ ಪ್ರಮಣಾದ ಅಭಿವೃದ್ಧಿ ಸಾಧ್ಯವಾಗಿದೆ. ಫೆಬ್ರವರಿ 2018 ರಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ವರದಿಯ ಪ್ರಕಾರ ಫ್ಯಾಕ್ಟರಿ ಔಟ್‍ಪುಟ್‍ನಲ್ಲಿ ಶೇ. 1.2 ರಷ್ಟು ಏರಿಕೆಯಾಗಿದೆ. ಕಳೆದ ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ಐಪಿಐ ಬೆಳವಣಿಗೆ ದರವು ಕ್ರಮವಾಗಿ ಶೇ. 8.54, ಶೇ. 7.1, ಶೇ. 7.4 ರಷ್ಟಿತ್ತು. ಇದೇ ವೇಳೆ ಕಳೆದ ವರ್ಷದ ಏಪ್ರಿಲ್ ವೇಳೆಗೆ ಐಐಪಿ ಬೆಳವಣಿಗೆ ಶೇ 4.7 ರಿಂದ ಶೇ 4.3 ರಷ್ಟಿತ್ತು.

ಇಬ್ಬರು ನಕ್ಸಲರ ಶರಣಾಗತಿ

ಛತ್ತೀಸ್ಗಡ, ಏ. 12: ಸತತ 15 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಲ್ಲಿನ ಇಬ್ಬರು ನಕ್ಸಲರು ಗುರುವಾರ ಪೆÇಲೀಸರಿಗೆ ಶರಣಾಗಿದ್ದಾರೆ. ಬಿಜಾಪುರದ ಮಂಜುಳಾ ಹಾಗೂ ಬಿಲಾಸ್ಪುರದ ಸುಂದರ ಶರಣಾದ ನಕ್ಸಲರು. ಶರಣಾದ ಇಬ್ಬರು ನಕ್ಸಲರು 15 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಬಾಂಬ್ ಸ್ಫೋಟ, ಅಪಹರಣ, ಎನ್‍ಕೌಂಟರ್ ಪ್ರಕರಣಗಳಲ್ಲಿ ಭಾಗಿಯಾಗಿರುವದಾಗಿ ಒಪ್ಪಿಕೊಂಡಿದ್ದಾರೆ ಎಂದು ದಂತೆವಾಡದ ಪೆÇಲೀಸ್ ವರಿಷ್ಠಾಧಿಕಾರಿ ಕಮಲ್ ಲೋಚನ್ ಕಶ್ಯಪ್ ಹೇಳಿದ್ದಾರೆ.

ಧಾರವಾಡದಲ್ಲಿ ಅಮಿತ್ ಶಾ ಧರಣಿ

ಧಾರವಾಡ, ಏ. 12: ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿ ವಿರೋಧಿಸಿ ಒಂದೆಡೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧರಣಿ ಆರಂಭಿಸಿದ್ದರೆ, ಮತ್ತೊಂದೆಡೆ ಧಾರವಾಡದಲ್ಲಿಯೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ನಾಯಕರು ಧರಣಿ ಕುಳಿತರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿರುವ ಅಮತ್ ಶಾ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ತೀವ್ರ ಗದ್ದಲವನ್ನುಂಟು ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಅಮಿತ್ ಶಾ ಅವರು ತೀವ್ರ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನರ ಕಲ್ಯಾಣಕ್ಕಿಂತಲೂ, ರಾಜಕೀಯವೇ ಮುಖ್ಯ ಎಂಬದನ್ನು ಸಾಬೀತು ಮಾಡಿದ್ದಾರೆಂದು ಹೇಳಿದ್ದಾರೆ. ತಮ್ಮ ಪ್ರತಿನಿಧಿಯಾಗಿ ಜನರು ಸಂಸತ್ತಿಗೆ ಆರಿಸಿ ಕಳುಹಿಸಿದ ವ್ಯಕ್ತಿ, ತಮ್ಮ ಹಿತಾಸಕ್ತಿಗೆ ಬದಲಾಗಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ಸಮಸ್ಯೆಗಳನ್ನು ನೀಡುತ್ತಿದ್ದಾರೆ ಎಂಬದನ್ನು ಜನರು ತಿಳಿದುಕೊಳ್ಳಬೇಕು. ಜನರ ಕಲ್ಯಾಣಕ್ಕಾಗಿ ಸರ್ಕಾರ ರಚನೆ ಮಾಡಿದ್ದ ಬಜೆಟ್‍ಅನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಮುಂದಾಗಿತ್ತು. ಆದರೆ, ವಿರೋಧ ಪಕ್ಷಗಳು ಪ್ರಮುಖವಾಗಿ ಕಾಂಗ್ರೆಸ್ ಪಕ್ಷಕ್ಕೆ ಅದು ಬೇಕಾಗಿಲ್ಲ. ಹೀಗಾಗಿ ಅದು ಈ ರೀತಿ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾದಾಮಿಯಿಂದ ಸ್ಪರ್ಧಿಸಲು ಸಿಎಂಗೆ ಒತ್ತಡ

ಬೆಂಗಳೂರು, ಏ. 12: ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದಲೂ ಸ್ಪರ್ಧಿಸುವಂತೆ ಗುರುವಾರ ನೂರಾರು ಜಿಲ್ಲಾ ಕಾಂಗ್ರೆಸ್ ಮುಂಖಡರು ಮನವಿ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್. ಪಾಟೀಲ್ ಹಾಗೂ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರ ನೇತೃತ್ವದಲ್ಲಿ ಇಂದು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಹಾಗೂ ಕುರುಬ ಸಮುದಾಯದ ಮುಖಂಡರು, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ಒತ್ತಾಯಿಸಿದರು. ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬೇಕು. ಮುಖ್ಯಮಂತ್ರಿಗಳ ಸ್ಪರ್ಧೆಯಿಂದ ಈ ಭಾಗದಲ್ಲಿ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಾಕರಿಯಾಗಲಿದೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಬಾಗಲಕೋಟೆ ಹಾಗೂ ಬಾದಾಮಿ ಕಾಂಗ್ರೆಸ್ ಮುಖಂಡರು ತಮ್ಮ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್‍ಗೆ ತಿಳಿಸಲಿ ಎಂದಿದ್ದಾರೆ.

ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶನ

ಚೆನ್ನೈ, ಏ. 12: ತಮಿಳುನಾಡಿನಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯ ಬಿಸಿ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ತಟ್ಟಿದೆ. ಇಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್ಪೋ 2018ಕ್ಕೆ ಚಾಲನೆ ನೀಡಲು ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಪ್ರತಿಭಟನೆಯ ಸ್ವಾಗತ ದೊರೆತಿದೆ. ಚೆನ್ನೈ ವಿಮಾನ ನಿಲ್ದಾಣದ ಹೊರಗೆ ಮತ್ತು ಮೋದಿ ತೆರಳುತ್ತಿದ್ದ ರಸ್ತೆಯ ಮಾರ್ಗದಲ್ಲಿ ಸಾವಿರಾರು ಜನ ಪ್ರತಿಭಟನಾಕಾರರು ಕಪ್ಪು ಬಾವುಟ, ಕಪ್ಪು ಬಲೂನ್ ಪ್ರದರ್ಶನ ಮಾಡಿದರು. ಮೋದಿಗೆ ದಿಕ್ಕಾರ, ಗೊ ಬ್ಯಾಕ್ ಮೋದಿ ಎಂಬ ಘೋಷಣೆಗಳನ್ನು ಕೂಗಿದರು. ಡಿಎಂಕೆ ಮತ್ತು ಮಿತ್ರ ಪಕ್ಷಗಳ ಕಾರ್ಯಕರ್ತರು ಕೂಡ ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಡಿಎಂಕೆ ಪಕ್ಷದ ನಾಯಕರ ಮನೆಗಳ ಮೇಲೂ ಕಪ್ಪು ಬಾವುಟಗಳನ್ನು ಹಾರಿಸಲಾಗಿತ್ತು. ಹಾರುತ್ತಿರುವ ಕಪ್ಪು ಬಾವುಟಗಳು ನಮ್ಮ ಭಾವನೆಗಳನ್ನು ಬಿಂಬಿಸುತ್ತಿವೆ, ಜನರು ತಮ್ಮ ಮನೆಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸಿದ್ದಾರೆ, ನೀವು ಈಗಲಾದರೂ ಎಚ್ಚೆತ್ತುಕೊಂಡು ಸುಪ್ರೀಂ ಕೋರ್ಟ್‍ನಲ್ಲಿರುವ ಅರ್ಜಿಯನ್ನು ವಾಪಾಸು ಪಡೆಯಿರಿ, ಇಲ್ಲವಾದಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಡಿಎಂಕೆ ನಾಯಕ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿಗೆ ಬಹಿರಂಗ ಪತ್ರ ಬರೆದ ಕಮಲ್

ನವದೆಹಲಿ, ಏ. 12: ನಟ ಕಮಲ್ ಹಾಸನ್ ಅವರು ಕಾವೇರಿ ನಿರ್ವಹಣಾ ಮಂಡಳಿ ರಚನೆ (ಸಿಡಬ್ಲ್ಯೂಎಂಬಿ)ಯಲ್ಲಾಗುತ್ತಿರುವ ವಿಳಂಬವನ್ನು ಪ್ರಶ್ನಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತಾಗಿ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶವನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ. ಮುಂದಿನ ತಿಂಗಳು ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಸಲುವಾಗಿ ಸಿಡಬ್ಲ್ಯೂಎಂಬಿ ರಚನೆ ತಡವಾಗುತ್ತಿದೆಯಾ? ಎಂದು ಪ್ರಶ್ನಿಸಿದ ಕಮಲ್, ತಮಿಳುನಾಡಿನ ಜನತೆ ಕರ್ನಾಟಕದಲ್ಲಿ ಚುನಾವಣೆಯ ಕಾರಣ ಮಂಡಳಿಯ ರಚನೆ ವಿಳಂಬವಾಗುತ್ತಿದೆ ಎಂದು ಭಾವಿಸಿದ್ದಾರೆ. ಸರ್, ಸುಪ್ರೀಂ ಕೋರ್ಟ್‍ನ ಆದೇಶದಲ್ಲಿ ಏನಾದರೂ ದೋಷವಿದ್ದಲ್ಲಿ ಪ್ರಧಾನ ಮಂತ್ರಿಯಾಗಿ ತಕ್ಷಣ ಪ್ರತಿಕ್ರಿಯಿಸಬೇಕಾಗಿರುವದು ನಿಮ್ಮ ಕರ್ತವ್ಯ ಎಂದು ಪತ್ರದಲ್ಲಿ ಹೇಳಿದ್ದಾರೆ.

ನೋಟು ನಿಷೇಧ ಒಳ್ಳೆಯ ಆಯ್ಕೆಯಲ್ಲ

ನವದೆಹಲಿ, ಏ. 12: ನೋಟು ನಿಷೇಧ ಮಾಡುವದು ಒಳ್ಳೆಯ ಆಯ್ಕೆಯಲ್ಲ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೆ ಎಂದು ಆರ್.ಬಿ.ಐ.ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಕೇಂದ್ರ ಸರ್ಕಾರ ನೋಟು ನಿಷೇಧವನ್ನು ಹೇಗೆ ಕಾರ್ಯಗತ ಗೊಳಿಸಬೇಕೆಂಬದನ್ನು ಸರಿಯಾಗಿ ಯೋಜಿಸಲಿಲ್ಲ ಎಂದೂ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಕೇಂಬ್ರಿಡ್ಜ್‍ನಲ್ಲಿರುವ ಹಾರ್ವರ್ಡ್ ಕೆನೆಡಿ ಸ್ಕೂಲ್‍ನಲ್ಲಿ ಮಾತನಾಡಿರುವ ರಘುರಾಮ್ ರಾಜನ್, ನೋಟು ನಿಷೇಧದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆರ್.ಬಿ.ಐ.ನೊಂದಿಗೆ ಸಮಾಲೋಚನೆ ನಡೆಸಿರಲ್ಲ ಎಂದಿದ್ದು, ಶೇ. 87.5 ರಷ್ಟು ಚಲಾವಣೆಯಲ್ಲಿದ್ದ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವದು ಸೂಕ್ತ ಆಯ್ಕೆಯಾಗಿರಲಿಲ್ಲ ಎಂಬದನ್ನು ರಘುರಾಮ್ ರಾಜನ್ ಮತ್ತೊಮ್ಮೆ ಹೇಳಿದ್ದಾರೆ. ಶೇ. 87.5 ರಷ್ಟು ಚಲಾವಣೆಯಲ್ಲಿದ್ದ ನೋಟುಗಳನ್ನು ನಿಷೇಧ ಮಾಡುವದಾದರೆ ಅಷ್ಟೇ ಪ್ರಮಾಣಾದ ನೋಟುಗಳನ್ನು ಮುಂಚೆಯೇ ಮುದ್ರಣಗೊಳಿಸಿ ಚಲಾವಣೆಗೆ ಸಿದ್ಧಗೊಳಿಸಬೇಕಿತ್ತು, ಆದರೆ ಈ ಕೆಲಸ ಆಗಲಿಲ್ಲ. ಹೊಸ ನೋಟುಗಳನ್ನು ಸಿದ್ಧಗೊಳಿಸದೇ ರಾತ್ರೋರಾತ್ರಿ ಹಳೆ ನೋಟುಗಳನ್ನು ರದ್ದುಗೊಳಿಸಿದರೆ ತೆರಿಗೆ ಪಾವತಿ ಮಾಡದೇ ಹಣವನ್ನು ಇಟ್ಟುಕೊಂಡಿದ್ದವರು, ಸರ್ಕಾರದ ಬಳಿ ಕ್ಷಮೆ ಕೇಳಿ ತಾವು ಮುಚ್ಚಿಟ್ಟಿದ್ದ ಹಣವನ್ನು ಬಹಿರಂಗಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಬಾಲಿಶ ಅಭಿಪ್ರಾಯ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.