ಸೋಮವಾರಪೇಟೆ, ಏ. 12: ನಬಾರ್ಡ್ ಸಂಸ್ಥೆಯ ಸಹಯೋಗದೊಂದಿಗೆ ಪಟ್ಟಣದಲ್ಲಿ ಪ್ರಾರಂಭವಾಗಿರುವ ಭುವನಮಂದಾರ ರೈತ ಉತ್ಪಾದಕರ ಸಂಘಕ್ಕೆ ನಬಾರ್ಡ್‍ನ ಅಧಿಕಾರಿಗಳು ಭೇಟಿ ನೀಡಿ, ಕಾರ್ಯ ಚಟುವಟಿಕೆಯನ್ನು ಪರಿಶೀಲಿಸಿದರು.

ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಗುಜರಾತ್ ರಾಜ್ಯಗಳಿಂದ ಬಂದಿರುವ ಅಧಿಕಾರಿಗಳ ತಂಡ, ಕಂಪೆನಿಯ ಆಡಳಿತ ವೈಖರಿ ಹಾಗೂ ರೈತರಿಗೆ ನೀಡುತ್ತಿರುವ ಸೌಲಭ್ಯಗಳು, ರೈತರ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ಜಿಲ್ಲಾ ನಬಾರ್ಡ್ ಬ್ಯಾಂಕಿನ ವ್ಯವಸ್ಥಾಪಕ ನಾಣಯ್ಯ, ಓ.ಡಿ.ಪಿ. ಸಿ.ಇ.ಒ.ಗಳಾದ ರಮೇಶ್, ಅಣ್ಣಮ್ಮ, ಸಂಘದ ಸಿಇಓ ಮಸಗೋಡು ದಯಾನಂದ, ನಿರ್ದೇಶಕರುಗಳಾದ ಎಸ್.ಎಂ. ಡಿಸಿಲ್ವಾ, ಮೋಹನ್‍ದಾಸ್, ರಮೇಶ್, ವಿನ್ಸಿ ಮತ್ತಿತರರು ಉಪಸ್ಥಿತರಿದ್ದರು.