ಮಡಿಕೇರಿ, ಏ. 12: ಮಡಿಕೇರಿಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಿಂದೂ ಮಲಯಾಳಿ ಬಾಂಧವರಿಗೆ ವಿಷು ಕಣಿಗೆ ಅತ್ಯಗತ್ಯವಾಗಿರ ತಕ್ಕಂತಹ ಕೊನ್ನೆ ಹೂ ಹಾಗೂ ವಿಷು ಕೈನೀಟಂ ಅನ್ನು ಆಂಜನೇಯ ದೇವಸ್ಥಾನದ ಬಳಿ ಇರುವ ಹರಿಹರ ಸರ್ವಿಸ್ ಸ್ಟೇಷನ್‍ನಲ್ಲಿ ತಾ. 14ರ ಸಂಜೆ 5.30 ಗಂಟೆಗೆ ವಿತರಣೆ ಮಾಡಲಾಗುವದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸಬ್‍ಇನ್ಸ್‍ಪೆಕ್ಟರ್, ಸಂಘದ ಓಣಂ ಸಮಿತಿ ಅಧ್ಯಕ್ಷ ಅಚ್ಚುತನ್ ನಾಯರ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಹಿಂದೂ ಮಲಯಾಳಿ ಫೆಡರೇಷನ್‍ನ ಗೌರವ ಅಧ್ಯಕ್ಷ ವಿಜಯನ್, ಜಿಲ್ಲಾ ಫೆಡರೇಷನ್‍ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಎಸ್.ಎನ್.ಡಿ.ಪಿ.ಯ ಮಡಿಕೇರಿ ಅಧ್ಯಕ್ಷ ವಾಸು, ಕೆ.ಎನ್.ಎಸ್.ನ ಮಡಿಕೇರಿ ಉಪಾಧ್ಯಕ್ಷ ಸೋನಾ ಉಣ್ಣಿಕೃಷ್ಣನ್, ಹಿಂದೂ ಮಲಯಾಳಿ ಫೆಡರೇಷನ್, ಮಡಿಕೇರಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ವಿ. ಧರ್ಮೇಂದ್ರ ತಿಳಿಸಿದ್ದಾರೆ.