ವೀರಾಜಪೇಟೆ, ಏ. 12: ಕೊಡಗು ಕಲೆ, ಸಂಸ್ಕøತಿ ಹಾಗೂ ಸುಂದರ ರಮಣೀಯ ನಿಸರ್ಗವನ್ನು ನೀಡಿದಂತಹ ಜಿಲ್ಲೆಯಾಗಿದ್ದು ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಕಾವೇರಿ ನದಿ ಹರಿಯುವ ಪರಿಸರ ಬೇರೆ ಎಲ್ಲೂ ನೋಡಲು ಸಿಗಲಾರದು ಎಂದು ಸಾಹಿತಿ ಮೈಸೂರಿನ ಪ್ರೊ. ಪಿ.ಕೆ. ರಾಜಶೇಖರ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಹಳೆ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ದಶ ಸಂಗಮ ಸಂಭ್ರಮ ಸಮಾರಂಭದಲ್ಲಿ ‘ವಿರಾಜಮಾರ್ಗ’ ಸಂಚಿಕೆ ಬಿಡುಗಡೆ ಗೊಳಿಸಿದ ಅವರು, ಕೊಡಗು ವೀರ ಯೋಧರ ನಾಡು ಇಲ್ಲಿನ ಆಚಾರ-ವಿಚಾರ, ಕಲೆ, ಸಂಸ್ಕøತಿ ಹಾಗೂ ಉಡುಪುಗಳಲ್ಲಿಯು ವಿಶಿಷ್ಟ ಪದ್ಧತಿಯನ್ನು ಹೊಂದಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸುಸಂಸ್ಕøತ ವಿದ್ಯೆಯನ್ನು ಕಲಿತು ತಮ್ಮ ಗುರಿಯನ್ನು ಸಾಧಿಸುವಂತಾಗಬೇಕು ಎಂದರು.
ಅಂತರ್ರಾಷ್ಟ್ರೀಯ ಕ್ರೀಡಾಪಟು ವ್ಯಕ್ತಿತ್ವ ವಿಕಸನ ತರಬೇತುದಾರ ಟಿ.ಡಿ. ಅರ್ಜುನ್ ದೇವಯ್ಯ ಅವರು ಕಾಲೇಜಿನ ಇತಿಹಾಸದ ಕಿರು ಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಹಾಗೂ ಛಲವಿದ್ದರೆ ಏನನ್ನೂ ಸಾಧಿಸಬಹುದು. ವಿದ್ಯಾರ್ಥಿ ಜೀವನ ಮಹತ್ವವಾದದ್ದು. ಕೊಡಗಿನ ಕಾವೇರಿ ಮಣ್ಣಿನಲ್ಲಿ ಮಹತ್ವದ ಶಕ್ತಿ ಇದ್ದು, ಯುವ ಶಕ್ತಿಯೇ ದೇಶದ ಶಕ್ತಿ. ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಲು ಪ್ರಯತ್ನಿಸಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಸರಕಾರಿ ಕಾಲೇಜು ಯಾವದ ರಲ್ಲಿಯೂ ಕಡಿಮೆ ಇಲ್ಲ. ಮುಂದೆಯೂ ಉತ್ತಮ ಶಿಕ್ಷಣ ನೀಡು ವಂತಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲರುಗಳಾದ ಹೆಚ್.ಕೆ. ಕೇಶವಯ್ಯ ಮತ್ತು ಡಾ. ಲೀಲಾ ಅಪ್ಪಾಜಿ ಅವರುಗಳಿಗೆ ಗೌರವಿಸ ಲಾಯಿತು. ಈ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೀತಿಯಂಡ ಬೋಪಣ್ಣ ಇತರರು ಉಪಸ್ಥಿತರಿದ್ದರು
ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಎಂ.ಎನ್. ವನೀತ್ ಕುಮಾರ್ ವರದಿ ಮಂಡಿಸಿದರು. ಕನ್ನಡ ವಿಭಾಗದ ಪ್ರೊ. ಡಿ.ಕೆ. ಉಷಾ ಸಾಹಿತಿಗಳ ಪರಿಚಯ ಮಾಡಿದರು. ಪ್ರೊ. ಆರ್. ರಘುರಾಜು ಮತ್ತು ಗೀತಾ ನಾಯ್ಡು ನಿರೂಪಿಸಿದರೆ. ವೇಣುಗೋಪಲ್ ವಂದಿಸಿದರು. ವಿದ್ಯಾರ್ಥಿಗಳು, ಪ್ರಾಧ್ಯಾಪಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.