ಮಡಿಕೇರಿ, ಏ.13 : ತುಳುವೆರೆ ಜನಪದ ಕೂಟದ ಕೊಡಗು ಜಿಲ್ಲಾ ಘಟಕದ ವತಿಯಿಂದ ‘ಬಿಸು ಪರ್ಬ’ ಸಂತೋಷ ಕೂಟ ಕಾರ್ಯಕ್ರಮ ತಾ.17ರಂದು ನಗರದ ಕಾವೇರಿ ಹಾಲ್‍ನಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಬಿಸು ಪರ್ಬ ಆಚರಣಾ ಸಮಿತಿ ಅಧ್ಯಕ್ಷ ಬಿ.ಬಿ.ಐತಪ್ಪ ರೈ ಹಾಗೂ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಅವರುಗಳು ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಬಿಸು ಪರ್ಬದ ಆಚರಣೆ ನಡೆಯಲಿದೆ ಎಂದು ಹೇಳಿದರು.
ತುಳು ಭಾಷಿಗರಿಗೆ ಬಿಸು ಹಬ್ಬ ಅತ್ಯಂತ ಮಹತ್ವದ ಹಬ್ಬವಾಗಿದ್ದು, ತುಳು ವರ್ಷಾಚರಣೆ ಕೂಡಾ ಇದೇ ದಿನದಿಂದ ಆರಂಭವಾಗುತ್ತದೆ. ಜಿಲ್ಲೆಯಲ್ಲಿ ತುಳು ಭಾಷೆಯನ್ನಾಡುವ ಸುಮಾರು 13 ಸಮುದಾಯಗಳಿದ್ದು, ನಮ್ಮದು ಜಾತಿಗಳು ಬೇರೆಬೇರೆ ಯಾಗಿದ್ದರೂ, ಭಾಷೆ ಒಂದೇ ಆಗಿರುವದರಿಂದ ತುಳು ಸಂಸ್ಕøತಿ ಆಚಾರ ವಿಚಾರ, ಪದ್ಧತಿ ಪರಂಪರೆ ಯನ್ನು ಉಳಿಸಿ ಬೆಳೆಸು ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಈ ಕಾರ್ಯಕ್ರಮ ವನ್ನು ಆಯೋಜಿಸುತ್ತಿರುವದಾಗಿ ವಿವರಿಸಿದರು.
ಅಂದು ಪೂರ್ವಾಹ್ನ 10 ಗಂಟೆಗೆ ಬಿಸು ಪರ್ಬ ಆಚರಣಾ ಸಮಿತಿ ಅಧ್ಯಕ್ಷ ಬಿ.ಬಿ.ಐತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ತುಳುವೆರೆ ಜನಪದ ಕೂಟದ ಅಧ್ಯಕ್ಷ ಕಿಲ್ಪಾಡಿ ಶೇಖರ ಭಂಡಾರಿ ನೆರವೇರಿಸಲಿದ್ದು, ಮಂಗಳೂರಿನ ದಯಾನಂದ ಕತ್ತಲ್ಸಾರ್ ಅವರು ಮುಖ್ಯ ಭಾಷಣಕಾರರಾಗಿ ಬಿಸು ಹಬ್ಬ, ತುಳು ಭಾಷೆ, ಸಂಸ್ಕøತಿಯ ಕುರಿತು ಉಪನ್ಯಾಸ ನೀಡಲಿದ್ದಾರೆ. ರಂಗೀತರಂಗ ಖ್ಯಾತಿಯ ನಿರೂಪ್ ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಜನಪದ ಕೂಟದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ. ಮಧ್ಯಾಹ್ನ ತುಳು ಸಂಸ್ಕøತಿಗೆ ಪೂರಕವಾದ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಅಪರಾಹ್ನ 2ಗಂಟೆಯಿಂದ ಸಂಜೆ 4ಗಂಟೆವರೆಗೆ ಸಿನಿಮಾ ನೃತ್ಯ, ಜನಪದ ನೃತ್ಯ ಸೇರಿದಂತೆ ಸುಮಾರು 12 ಕಲಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬಳಿಕ 7 ಗಂಟೆಯವರೆಗೆ ಉಮೇಶ್ ಮಿಜಾರು ತಂಡದವರಿಂದ ‘ತೆಲಿಕೆದ ಗೊಂಚಿಲ್’ ಹಾಸ್ಯಮಯ ನಾಟಕ ಹಾಗೂ ಇತರ ಕಾರ್ಯಕ್ರಮಗಳು ಜರುಗಲಿವೆÉ ಎಂದು ನುಡಿದರು. ಗೋಷ್ಠಿಯಲ್ಲಿ ತುಳುವೆÀರೆ ಜನಪದ ಕೂಟದ ಉಪಾಧ್ಯಕ್ಷರು ಗಳಾದ ಬಿ.ಡಿ.ನಾರಾಯಣ ರೈ, ಬಿ.ವೈ. ಆನಂದ ರಘು, ಸಲಹೆಗಾರ ಎಂ.ಡಿ. ನಾಣಯ್ಯ ಕುಲಾಲ್ ಉಪಸ್ಥಿತರಿದ್ದರು.