ಸೋಮವಾರಪೇಟೆ, ಏ. 13: ಇಲ್ಲಿನ ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸ ಲಾಗಿರುವ ಅಂತರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ಅವರ ತಂದೆ ದಿ. ವಿಠಲಾಚಾರ್ಯ ಸ್ಮರಣಾರ್ಥ ಕಪ್ ಹಾಕಿ ಪಂದ್ಯಾಟಕ್ಕೆ ಚಾಲನೆ ದೊರೆತಿದ್ದು, ಪ್ರಥಮ ದಿನದಂದು ನಾಲ್ಕು ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ.ಕಳೆದ 4 ವರ್ಷಗಳಿಂದ ನಿರಂತರವಾಗಿ ಹಾಕಿ ಪಂದ್ಯಾಟವನ್ನು ಆಯೋಜಿಸಿಕೊಂಡು ಬರುತ್ತಿರುವ ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ಸೇರಿದಂತೆ ಜಿಲ್ಲೆಯ 8 (ಮೊದಲ ಪುಟದಿಂದ)ಪ್ರತಿಷ್ಠಿತ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ವೀರಾಜಪೇಟೆ-ಕುತ್ತುನಾಡು ಡ್ರಿಬ್‍ಲೆಸ್ ಸ್ಪೋಟ್ರ್ಸ್ ಕ್ಲಬ್ ಮತ್ತು ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಡ್ರಿಬಲ್ಸ್ ತಂಡವು 5-0 ಗೋಲುಗಳ ಅಂತರದಿಂದ ಪೊನ್ನಂಪೇಟೆ ತಂಡವನ್ನು ಮಣಿಸಿತು.ವಿಜೇತ ತಂಡದ ಪರ ನೆಲ್ ದೇವಯ್ಯ 3, ಬೋಪಣ್ಣ ಮತ್ತು ಅಪ್ಪಚ್ಚು ತಲಾ ಒಂದೊಂದು ಗೋಲು ದಾಖಲಿಸಿದರು.
ಆತಿಥೇಯ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ಮತ್ತು ಬ್ಲೂಸ್ಟಾರ್ ಪದ್ದಮಾನಿ ತಂಡಗಳ ನಡುವೆ ಏರ್ಪಟ್ಟ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಎರಡೂ ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿದವು. ಡಾಲ್ಪೀನ್ಸ್ ಪರ ಆಭರಣ್ ಮತ್ತು ಕಾಳಿಮುತ್ತು ಗೋಲು ದಾಖಲಿಸಿದರೆ, ಬ್ಲೂಸ್ಟಾರ್ ತಂಡದ ಪರ ಪೂವಯ್ಯ ಮತ್ತು ಸುಬ್ಬಯ್ಯ ಗೋಲು ಹೊಡೆದರು.
ನಂತರ ನಡೆದ ಶೂಟ್ ಔಟ್‍ನಲ್ಲಿ 3-2 ಗೋಲುಗಳ ಅಂತರದಲ್ಲಿ ಆತಿಥೇಯ ಡಾಲ್ಪೀನ್ಸ್ ತಂಡ ಜಯಶಾಲಿಯಾಯಿತು.
ಯುಎಸ್‍ಸಿ ಬೇರಳಿನಾಡು ತಂಡ ಗೈರಾದ ಹಿನ್ನೆಲೆ ಹಾತೂರು ಸ್ಪೋಟ್ರ್ಸ್ ಕ್ಲಬ್, ವೀರಾಜಪೇಟೆ ಟವರ್ಸ್ ತಂಡ ಗೈರಾದ ಹಿನ್ನೆಲೆ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳಿಗೆ ವಾಕ್ ಓವರ್ ನೀಡಲಾಯಿತು.
ಪಂದ್ಯಾಟದ ತೀರ್ಪುಗಾರರಾಗಿ ಬುಟ್ಟಿಯಂಡ ಚಂಗಪ್ಪ, ನೆಲ್ಲಮಕ್ಕಡ ಪವನ್, ಕೋಡಿಮಣಿಯಂಡ ಗಣಪತಿ, ಬೊಳ್ಳಚಂಡ ನಾಣಯ್ಯ, ಅಣ್ಣಾಡಿಯಂಡ ಪೊನ್ನಣ್ಣ ಅವರುಗಳು ಕಾರ್ಯನಿರ್ವಹಿಸಿದರು.
ಇದಕ್ಕೂ ಮುನ್ನ ಹಾಕಿ ಪಂದ್ಯಾಟಕ್ಕೆ ಉದ್ಯಮಿಗಳಾದ ವೇಣು ಬಿಳಿಮಗ್ಗ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸೋಮವಾರಪೇಟೆ ಮೈದಾನದಲ್ಲಿ ಆಟವಾಡಿದ ಹಲವಷ್ಟು ಮಂದಿ ಇಂದು ಅಂತರಾಷ್ಟ್ರೀಯ ಮಟ್ಟದ ಹಾಕಿಯಲ್ಲಿ ಸಾಧನೆ ತೋರುತ್ತಿದ್ದಾರೆ. ಮಕ್ಕಳಿಗೆ ಹಾಕಿ ಕ್ರೀಡೆ ಬಗ್ಗೆ ಆಸಕ್ತಿ ಮೂಡಿಸಿ ಅಗತ್ಯ ತರಬೇತಿ ನೀಡುವಲ್ಲಿ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ತೊಡಗಿಸಿ ಕೊಂಡಿರುವದು ಶ್ಲಾಘನೀಯ ಎಂದರು.
ಈ ಸಂದರ್ಭ ಅಂತರಾಷ್ಟ್ರೀಯ ಹಾಕಿ ಆಟಗಾರ ವಿಕ್ರಂಕಾಂತ್, ಕಾಫಿ ಬೆಳೆಗಾರ ಹಾಗೂ ಹಿರಿಯ ಹಾಕಿಪಟು ಬಿ.ಎಂ. ಸುರೇಶ್, ಕೂಡಿಗೆ ಕ್ರೀಡಾ ಶಾಲೆಯ ತರಬೇತುದಾರ ವೆಂಕಟೇಶ್, ಡಾಲ್ಪೀನ್ಸ್ ಸ್ಟೋಟ್ರ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ಸೇರಿದಂತೆ ಪದಾಧಿಕಾರಿ ಗಳು ಉಪಸ್ಥಿತರಿದ್ದರು.