ನಾಪೆÇೀಕ್ಲು, ಏ. 13: ನಾಪೋಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಇಂಡಿಯಾ ಮತ್ತು ಕುಲ್ಲೇಟಿರ ಕುಟುಂಬದ ಸಹಯೋಗದಲ್ಲಿ ನಡೆಯಲಿರುವ ಕೊಡವ ಹಾಕಿ ನಮ್ಮೆಯ 22ನೇ ವರ್ಷದಲ್ಲಿ ಮೊದಲ ಬಾರಿಗೆ 333 ಕೊಡವ ಕುಟುಂಬ ತಂಡಗಳು ಪಾಲ್ಗೊಳ್ಳುತ್ತಿದ್ದು, ಹೊಸ ಇತಿಹಾಸ, ದಾಖಲೆ ಸೃಷ್ಟಿಸಲಿದೆ. 1997ನೇ ಇಸವಿಯಲ್ಲಿ ಕರಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೊದಲ ಬಾರಿಗೆ ಆರಂಭಗೊಂಡ ಪಾಂಡಂಡ ಕಪ್ ಹಾಕಿ ನಮ್ಮೆಯಲ್ಲಿ 60 ಕುಟುಂಬ ತಂಡಗಳ ಪಾಲ್ಗೊಳ್ಳುವಿಕೆಯೊಂದಿಗೆ ಹೆಜ್ಜೆಯಿಟ್ಟ ಹಾಕಿ ನಮ್ಮೆಯು ಈ ವರ್ಷ ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ 333 ಕೊಡವ ಕುಟುಂಬ ತಂಡಗಳು ಪಾಲ್ಗೊಳ್ಳುವದರ ಮೂಲಕ ಹೊಸ ದಾಖಲೆ ಸೃಷ್ಟಿಸಲು ಸಕಲ ಸಿದ್ಧತೆ ನಡೆದಿದೆ.ಕಳೆದ ವರ್ಷ ಇದೇ ಕ್ರೀಡಾಂಗಣದಲ್ಲಿ ನಡೆದ ಬಿದ್ದಾಟಂಡ ಕಪ್ ಹಾಕಿ ನಮ್ಮೆಯಲ್ಲಿ 306 ಕುಟುಂಬ ತಂಡಗಳು ಪಾಲ್ಗೊಂಡಿದ್ದವು.
ತಾ. 15ರಂದು ಆರಂಭ ಗೊಳ್ಳಲಿರುವ ಕುಲ್ಲೇಟಿರ ಕಪ್ ಹಾಕಿ ನಮ್ಮೆಯು ಹಾಕಿ ನಮ್ಮೆಗೆ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ ನೇತೃತ್ವದಲ್ಲಿ ಆಯಾಯ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಕುಟುಂಬಸ್ಥರ ಸಹಕಾರದೊಂದಿಗೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸ ಲಾಗುತ್ತಿದೆ.
ನಾಪೆÇೀಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಮೂರು ಹಾಕಿ ಮೈದಾನಗಳಿಗೆ ಸಾಕ್ಷಿಯಾಗಿದೆ. ಮೊದಲು ಇಲ್ಲಿ ಒಂದು ಹಾಕಿ ಮೈದಾನ ಮಾತ್ರ ಇತ್ತು. ಬಿದ್ದಾಟಂಡ ಹಾಕಿ ನಮ್ಮೆಯ
(ಮೊದಲ ಪುಟದಿಂದ) ಕಾರಣದಿಂದ ಸಮೀಪದಲ್ಲಿಯೇ ಇದ್ದ ಸರಕಾರಿ ಕಾಲೇಜಿನ ಜಾಗದಲ್ಲಿ ಎರಡು ನೂತನ ಮೈದಾನಗಳನ್ನು ನಿರ್ಮಿಸಿ ಸಜ್ಜುಗೊಳಿಸಲಾಯಿತು. ಇದರಿಂದಾಗಿ ಹಾಕಿ ಪ್ರೇಮಿಗಳು ಒಂದೇ ಜಾಗದಲ್ಲಿ ಮೂರು ಮೈದಾನದಲ್ಲಿ ನಡೆಯುವ ಪಂದ್ಯಾಟವನ್ನು ವೀಕ್ಷಿಸಲು ಸಾಧ್ಯವಾದಂತಾಗಿದೆ.
ಉದ್ಘಾಟನಾ ಪಂದ್ಯ ಮತ್ತು ಅಂತಿಮ ಪಂದ್ಯ ನಡೆಯುವ ಒಂದನೇ ಮೈದಾನದಲ್ಲಿ ಸುತ್ತ ಮೆಟಲ್ ಗ್ಯಾಲರಿ ಅಳವಡಿಸುವ ಕಾರ್ಯ ಮುಕ್ತಾಯ ಹಂತದಲ್ಲಿದೆ. ಅದರೊಂದಿಗೆ ಮೈದಾನದ ಸುತ್ತ ಗ್ಯಾಲರಿ, ನೆಲ ಹಾಸು, ತಾಂತ್ರಿಕ ವಿಭಾಗ, ಮಾಧ್ಯಮ ವಿಭಾಗ, ಧ್ವನಿ ವರ್ಧಕ, ಬೆಳಕಿನ ವ್ಯವಸ್ಥೆ, ವಿಐಪಿ ಗ್ಯಾಲರಿ, ಸ್ಟಾಲ್‍ಗಳು, ಹೊಟೇಲ್‍ಗಳು ಮತ್ತಿತರ ನಿರ್ಮಾಣಗಳ ಕಾಮಗಾರಿ ಸಮಾರೋಪಾದಿಯಲ್ಲಿ ನಡೆಯುತ್ತಿದೆ.
ಕಳೆದ 21 ವರ್ಷಗಳಲ್ಲಿ ನಡೆದ ಕೊಡವ ಹಾಕಿ ನಮ್ಮೆಯ ಟ್ರೋಫಿಯನ್ನು ಕಲಿಯಂಡ ಕುಟುಂಬವು 3 ಬಾರಿ, ಕುಲ್ಲೇಟಿರ 2 ಬಾರಿ, ಕೂತಂಡ 3 ಬಾರಿ, ನೆಲ್ಲಮಕ್ಕಡ 3 ಬಾರಿ, ಪಳಂಗಂಡ 5 ಬಾರಿ, ಮಂಡೇಪಂಡ 1 ಬಾರಿ ಹಾಗೂ ಅಂಜಪರವಂಡ ಕುಟುಂಬ 2 ಬಾರಿ ಮತ್ತು ಚೇಂದಂಡ ಕುಟುಂಬ ಒಂದು ಬಾರಿ ಮುಡಿಗೇರಿಸಿಕೊಂಡಿದ್ದರೆ, 1999ರಲ್ಲಿ ಕಾಕೋಟುಪರಂಬುವಿನಲ್ಲಿ ನಡೆದ ಬಲ್ಲಚಂಡ ಹಾಕಿ ನಮ್ಮೆಯಲ್ಲಿ ಕುಲ್ಲೇಟಿರ ಮತ್ತು ಕೂತಂಡ ತಂಡವು ಜಂಟಿಯಾಗಿ ಮೊದಲ ಬಹುಮಾನ ಸ್ವೀಕರಿಸಿದವು. ಈ ಬಲಿಷ್ಠ ತಂಡಗಳ ಪಂದ್ಯಾಟವನ್ನು ವೀಕ್ಷಿಸಲು ಸಾಧ್ಯವಾದಂತಾಗಿದೆ.
ಉದ್ಘಾಟನಾ ಪಂದ್ಯ ಮತ್ತು ಅಂತಿಮ ಪಂದ್ಯ ನಡೆಯುವ ಒಂದನೇ ಮೈದಾನದಲ್ಲಿ ಸುತ್ತ ಮೆಟಲ್ ಗ್ಯಾಲರಿ ಅಳವಡಿಸುವ ಕಾರ್ಯ ಮುಕ್ತಾಯ ಹಂತದಲ್ಲಿದೆ. ಅದರೊಂದಿಗೆ ಮೈದಾನದ ಸುತ್ತ ಗ್ಯಾಲರಿ, ನೆಲ ಹಾಸು, ತಾಂತ್ರಿಕ ವಿಭಾಗ, ಮಾಧ್ಯಮ ವಿಭಾಗ, ಧ್ವನಿ ವರ್ಧಕ, ಬೆಳಕಿನ ವ್ಯವಸ್ಥೆ, ವಿಐಪಿ ಗ್ಯಾಲರಿ, ಸ್ಟಾಲ್‍ಗಳು, ಹೊಟೇಲ್‍ಗಳು ಮತ್ತಿತರ ನಿರ್ಮಾಣಗಳ ಕಾಮಗಾರಿ ಸಮಾರೋಪಾದಿಯಲ್ಲಿ ನಡೆಯುತ್ತಿದೆ.
ಕಳೆದ 21 ವರ್ಷಗಳಲ್ಲಿ ನಡೆದ ಕೊಡವ ಹಾಕಿ ನಮ್ಮೆಯ ಟ್ರೋಫಿಯನ್ನು ಕಲಿಯಂಡ ಕುಟುಂಬವು 3 ಬಾರಿ, ಕುಲ್ಲೇಟಿರ 2 ಬಾರಿ, ಕೂತಂಡ 3 ಬಾರಿ, ನೆಲ್ಲಮಕ್ಕಡ 3 ಬಾರಿ, ಪಳಂಗಂಡ 5 ಬಾರಿ, ಮಂಡೇಪಂಡ 1 ಬಾರಿ ಹಾಗೂ ಅಂಜಪರವಂಡ ಕುಟುಂಬ 2 ಬಾರಿ ಮತ್ತು ಚೇಂದಂಡ ಕುಟುಂಬ ಒಂದು ಬಾರಿ ಮುಡಿಗೇರಿಸಿಕೊಂಡಿದ್ದರೆ, 1999ರಲ್ಲಿ ಕಾಕೋಟುಪರಂಬುವಿನಲ್ಲಿ ನಡೆದ ಬಲ್ಲಚಂಡ ಹಾಕಿ ನಮ್ಮೆಯಲ್ಲಿ ಕುಲ್ಲೇಟಿರ ಮತ್ತು ಕೂತಂಡ ತಂಡವು ಜಂಟಿಯಾಗಿ ಮೊದಲ ಬಹುಮಾನ ಸ್ವೀಕರಿಸಿದವು. ಈ ಬಲಿಷ್ಠ ತಂಡಗಳ
ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಮಳೆ ದೂರವಾಗುವ ಅಶಾಭಾವನೆಯಿಂದ ಸಿದ್ಧತೆಗಳನ್ನು ಭರದಿಂದ ನಡೆಸ ಲಾಗುತ್ತಿದೆ.
ತಾ. 15ರಂದು ಬೆಳಿಗ್ಗೆ 10.30 ಆರಂಭಗೊಳ್ಳುವ ಹಾಕಿ ನಮ್ಮೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಅಡಿಷನಲ್ ಅಡ್ವೊಕೇಟ್ ಜನರಲ್ ಅಜ್ಜಿಕುಟ್ಟಿರ ಪೊನ್ನಣ್ಣ, ಭಾರತ ತಂಡದ ಮಾಜಿ ನಾಯಕ ಮೊಳ್ಳೆರ ಪಿ.ಗಣೇಶ್, ಕೊಡವ ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ, ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಉಸ್ತವಾರಿ ಸಚಿನ ಎಂ.ಆರ್.ಸೀತಾರಾಮ್, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಿರುವ ಪ್ರಬುಜೋತ್ ಸಿಂಗ್, ದೀಪಕ್ ಠಾಕೂರ್, ದೇವೇಶ್ ಚೌಹಾಣ್, ಯುವರಾಜ್ ವಾಲ್ಮಿಕ್, ವಿಕ್ರಂಪಿಳ್ಳೆ, ಸಮೀರ್‍ದಾಸ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿರುವರು. ಅಧ್ಯಕ್ಷತೆಯನ್ನು ಕುಲ್ಲೇಟಿರ ಕುಟುಂಬದ ಪಟ್ಟೇದಾರ ಮಾದಪ್ಪ ವಹಿಸಲಿರುವರು.
-ಚಿತ್ರ, ವರದಿ: ಪಿ.ವಿ.ಪ್ರಭಾಕರ್