ಶನಿವಾರಸಂತೆ, ಏ. 14: ಸ್ಥಳೀಯ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿದ್ದ ನಯನ ಹಾಗೂ ನಾಲ್ಕನೇ ದರ್ಜೆ ನಿವೃತ್ತ ನೌಕರ ದೊಡ್ಡಯ್ಯ ಅವರಿಗೆ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್ ಮಾತನಾಡಿ, ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ನೌಕರರ ಹೆಸರಿಗಿಂತಲೂ ಅವರು ಸಲ್ಲಿಸಿದ ಸೇವೆ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದರು.

ಸನ್ಮಾನಿತರ ಪರವಾಗಿ ವೃತ್ತಿಗೆ ರಾಜೀನಾಮೆ ನೀಡಿದ ಉಪನ್ಯಾಸಕಿ ನಯನ ತಮ್ಮ 5 ವರ್ಷಗಳ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡು ಕೃತಜ್ಞತೆ ಸಲ್ಲಿಸಿದರು. ಹಿರಿಯ ಉಪನ್ಯಾಸಕ ಈ.ಎಂ. ದಯಾನಂದ್ ಸ್ವಾಗತಿಸಿ, ಉಪನ್ಯಾಸಕ ಹರೀಶ್ ವಂದಿಸಿದರು.