ಮಡಿಕೇರಿ, ಏ. 14: ವಿಧಾನಸಭಾ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗವು ಇತ್ತೀಚೆಗೆ ಜಿಲ್ಲೆಯ 530 ಮತಗಟ್ಟೆ ಕೇಂದ್ರಗಳಲ್ಲಿ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಂಡಿತ್ತು. ಜಿಲ್ಲೆಯಲ್ಲಿ ನಮೂನೆ-6 ರಡಿ 18 ರಿಂದ 19 ವರ್ಷದೊಳಗಿನ ಯುವ ಮತದಾರರು ಹೊಸದಾಗಿ ಸೇರ್ಪಡೆಗೆ 1933 ಮಂದಿ ಹಾಗೂ 20 ವರ್ಷಕ್ಕಿಂತ ಮೇಲ್ಪಟ್ಟು 2769 ಮಂದಿ ಅರ್ಜಿ ಸಲ್ಲಿಸಿದ್ದು, ಒಟ್ಟು ಜಿಲ್ಲೆಯಲ್ಲಿ ನಮೂನೆ 6 ರಡಿ ಹೊಸದಾಗಿ 4,702 ಮಂದಿ ಮತದಾರರ ಗುರುತಿನ ಚೀಟಿ ಪಡೆಯಲು ಹೆಸರು ನೋಂದಾಯಿಸಿದ್ದಾರೆ.
ನಮೂನೆ-7 ರಡಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು 485 ಅರ್ಜಿಗಳು ಸಲ್ಲಿಕೆಯಾಗಿವೆ, ನಮೂನೆ-8 ರಡಿ ತಿದ್ದುಪಡಿಗೆ 1,161 ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗೆಯೇ ನಮೂನೆ-8ಎ ರಡಿ ವರ್ಗಾವಣೆಗೆ 170 ಅರ್ಜಿಗಳು ಸಲ್ಲಿಕೆಯಾಗಿವೆ.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ 6 ರಡಿ 18 ರಿಂದ 19 ವರ್ಷದೊಳಗಿನ 714 ಮಂದಿ ಹೆಸರು ನೋಂದಾಯಿ ಸಿದ್ದಾರೆ. 20 ವರ್ಷ ಮೇಲ್ಪಟ್ಟು 1071 ಮಂದಿ ಒಟ್ಟು 1785 ಮಂದಿ ಅರ್ಜಿ ಸಲ್ಲಿಸಿದ್ದಾರೆ. ನಮೂನೆ-7 ರಡಿ 226 ಮಂದಿ, ನಮೂನೆ-8 ರಡಿ 409 ಮಂದಿ, ನಮೂನೆ-8ಎ ರಡಿ 56 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-6 ರಡಿ 18 ರಿಂದ 19 ವರ್ಷದೊಳಗಿನ 1219 ಮಂದಿ ಅರ್ಜಿ ಸಲ್ಲಿಸಿದ್ದಾರೆ. 20 ವರ್ಷ ಮೇಲ್ಪಟ್ಟು 1698 ಮಂದಿ, ಒಟ್ಟು 2917 ಮಂದಿ ಅರ್ಜಿ ಸಲ್ಲಿಸಿದ್ದಾರೆ, ನಮೂನೆ-7 ರಡಿ 259 ಮಂದಿ, ನಮೂನೆ-8 ರಡಿ 752 ಮಂದಿ, ನಮೂನೆ-8ಎ ರಡಿ 114 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 5,58,824 ಜನಸಂಖ್ಯೆ ಇದ್ದು, ಇವರಲ್ಲಿ 2,74,455 ಮಂದಿ ಪುರುಷರು ಮತ್ತು 2,84,369 ಮಂದಿ ಮಹಿಳಾ ಜನಸಂಖ್ಯೆ ಹೊಂದಿದೆ. ಜನವರಿ 1, 2018 ಕ್ಕೆ ಜಿಲ್ಲೆಯಲ್ಲಿ 4,25,023 ಮಂದಿ ಮತದಾರರಿದ್ದು ಇವರಲ್ಲಿ 2,12,071 ಮಂದಿ ಪುರುಷ ಮತದಾರರು ಮತ್ತು 2,12,936 ಮಂದಿ ಮಹಿಳಾ ಮತದಾರರು ಇದ್ದಾರೆ. ಹಾಗೆಯೇ 16 ಮಂದಿ ಇತರೆ ಮತದಾರರಿದ್ದಾರೆ. ಜೊತೆಗೆ 997 ಮಂದಿ ಸೇವಾ ಮತದಾರರು ಇದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 2,77,830 ಜನಸಂಖ್ಯೆ ಇದ್ದು, 1,36,293 ಪುರುಷರು ಮತ್ತು 1,41,537 ಮಹಿಳೆಯರು ಇದ್ದಾರೆ. ಇವರಲ್ಲಿ 2,12,277 ಮಂದಿ ಮತದಾರರಿದ್ದು, 1,05,392 ಪುರುಷ ಮತದಾರರು ಮತ್ತು 1,06,879 ಮಹಿಳಾ ಮತದಾರರು ಇದ್ದಾರೆ. ಜೊತೆಗೆ 6 ಇತರೆ ಮತದಾರರು ಇದ್ದಾರೆ. ಹಾಗೆಯೇ 449 ಸೇವಾ ಮತದಾರರು ಇದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 2,80,994 ಜನಸಂಖ್ಯೆ ಇದ್ದು, ಇವರಲ್ಲಿ 1,38,162 ಮಂದಿ ಪುರುಷರು ಮತ್ತು 1,42,832 ಮಂದಿ ಮಹಿಳೆಯರು ಇದ್ದಾರೆ. ಇವರಲ್ಲಿ 2,12,746 ಮಂದಿ ಮತದಾರರಿದ್ದು, 1,06,679 ಪುರುಷ ಮತದಾರರು ಮತ್ತು 1,06,057 ಮಹಿಳಾ ಮತದಾರರು ಇದ್ದಾರೆ. ಜೊತೆಗೆ 10 ಮಂದಿ ಇತರೆ ಮತದಾರರು ಇದ್ದಾರೆ. ಹಾಗೆಯೇ 548 ಸೇವಾ ಮತದಾರರಿದ್ದಾರೆ.