ಚೆಟ್ಟಳ್ಳಿ, ಏ. 14: ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಬೇತ್ರಿ ಕಿಗ್ಗಾಲು ಗ್ರಾಮದವರಾದ ಐಚಿಟ್ಟೀರ ಪಿ. ಅಪ್ಪಯ್ಯ ಅವರು ಬೆಳ್ಳಿಯ ಸರಮಾಲೆಯನ್ನು ಕಾಣಿಕೆಯಾಗಿ ಅರ್ಪಿಸಿದರು.

ಭಗಂಡೇಶ್ವರ ದೇವಾಲಯ ದಲ್ಲಿರುವ ಸುಬ್ರಹ್ಮಣ್ಯ ದೇವರ ಗುಡಿಗೆ ಕೊಡಗಿನವರೇ ಆದ ಬೆಂಗಳೂರಿನ ಉದ್ಯಮಿಯಾದ ಮುಕ್ಕಾಟಿ ಮನೋಜ್ ಕುಮಾರ್ ಅವರು ಸುಮಾರು ಮೂರು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಐದೂವರೆ ಕೆ.ಜಿ.ಯಷ್ಟು ಬೆಳ್ಳಿಯ ಬಾಗಿಲನ್ನು ಅವರ ಸಂಸಾರ ಸಹಿತವಾಗಿ ಬಂದು ದೇವರಿಗೆ ಅರ್ಪಿಸಿದರು. ಹಾಗೆಯೇ ಸತ್ಯನಾರಾಯಣ ಪೂಜೆಗೆ ಬಳಸುವ ಬೆಳ್ಳಿಯ ಮಂಟಪವನ್ನು ಉಡುಗೊರೆಯಾಗಿ ನೀಡಿದರು.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಉದಿಯಂಡ ಸುಭಾಷ್, ಅಣ್ಣಯ್ಯ, ಸಣ್ಣುವಂಡ ಕಾವೇರಪ್ಪ, ಅರ್ಚಕ ರವಿಕುಮಾರ್, ಪಾರುಪತ್ತೆಗಾರರಾದ ಪೊನ್ನಣ್ಣ, ಹರೀಶ್ ಭಟ್, ವಿಕ್ರಂ ಭಟ್ ಮುಂತಾದವರು ಹಾಜರಿದ್ದರು.