ಕೂಡಿಗೆ, ಏ. 14: ಸೈನಿಕ ಶಾಲಾ ಸೊಸೈಟಿಯು ಸ್ವಯಂ ಪ್ರೇರಣೆಯಿಂದ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಪುರುಲಿಯಾ ಸೈನಿಕ ಶಾಲೆ ಮತ್ತು ಕೂಡಿಗೆ ಸೈನಿಕ ಶಾಲೆ ಪರಸ್ಪರ ಸಾಂಸ್ಕøತಿಕ ವಿನಿಮಯ ಮಾಡಿ ಕೊಳ್ಳುವ 'ಏಕ್ ಭಾರತ್ ಶ್ರೇಷ್ಠ ಭಾರತ್' ಕಾರ್ಯಕ್ರಮವನ್ನು ಆಯೋ ಜಿಸಲಾಗಿದ್ದು, ಈ ಕಾರ್ಯಕ್ರಮದ ಅಂಗವಾಗಿ ಕೂಡಿಗೆಯ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ವನ್ನು ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತೀಯರಾದ ನಾವುಗಳು ನಮ್ಮ ದೇಶದ ಎಲ್ಲಾ ಪ್ರಾಂತ್ಯ ಮತ್ತು ರಾಜ್ಯಗಳ ಸಂಸ್ಕøತಿ, ಭಾಷೆ ಮತ್ತು ಆಚಾರ-ವಿಚಾರಗಳ ಕುರಿತು ಜ್ಞಾನ ಹೊಂದಿರ ಬೇಕು. ಈ ಮೂಲಕ ನಾವುಗಳೆಲ್ಲಾ ಒಂದೇ ಎಂಬ ಮನೋ ಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದರು. ಸೈನಿಕ ಶಾಲೆಯ 120 ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಕೆಡೆಟ್ ದೇವಯ್ಯ ಪ್ರಥಮ ಸ್ಥಾನವನ್ನು, ಕೆಡೆಟ್ ಭರತ್ ದ್ವಿತೀಯ ಸ್ಥಾನವನ್ನು ಮತ್ತು ಕೆಡೆಟ್ ಸುಜಿತ್ ಬಿರಾದಾರ್ ತೃತೀಯ ಸ್ಥಾನ ಗಳಿಸಿದರು. ನಂತರ ಶಾಲೆಯ ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು ಭಾರತದ ಬಹುಭಾಷೆ ಮತ್ತು ಸಾಂಸ್ಕøತಿಕ ವೈವಿಧ್ಯತೆಯ ಕುರಿತು ಉಪನ್ಯಾಸ ನೀಡಿದರು. ಅಲ್ಲದೆ, ಶಾಲೆಯ ವಿದ್ಯಾರ್ಥಿಗಳಾದ ಕೆಡೆಟ್ ಶಯನ್ ಸೋಮಣ್ಣ ಅವರು ನೇತಾಜಿ ಸುಭಾಷ್ ಚಂದ್ರ ಭೋಸ್ರವರ ಜೀವನ ಚರಿತ್ರೆ, ಕೆಡೆಟ್ ಗೋಯಾಂಕ್ ರೆಡ್ಡಿ ಅವರು ಚಲನ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಜೀವನ ಚರಿತ್ರೆ, ಕೆಡೆಟ್ ಶಿವಕುಮಾರ್ ಅವರು ಏರ್ ಮಾರ್ಷಲ್ ಸುಬ್ರತೋ ಮುಖರ್ಜಿ ಒಬಿಇ ಅವರ ಜೀವನ ಚರಿತ್ರೆ, ಕೆಡೆಟ್ ಪ್ರಥ್ವಿ ಪಾಟೀಲ್ ಅವರು ಅರವಿಂದೋ ಘೋಷ್ ಅವರ ಜೀವನ ಚರಿತ್ರೆ ಮತ್ತು ಕೆಡೆಟ್ ರಾಹುಲ್ ಹಟ್ಟಿ ಅವರು ಸಂರಕ್ಷಿತ ಅರಣ್ಯವಾದ ಸುಂದರ್ ಬನ್ಸ್ ಕುರಿತು ವಿಚಾರ ಸಂಕಿರಣ ನಡೆಸಿ ಕೊಟ್ಟರು. ಈ ವಿಚಾರ ಸಂಕಿರಣದಲ್ಲಿ ಪ್ರಸ್ತುತಪಡಿಸಿದ ವಿಚಾರಗಳೆಲ್ಲವೂ ಪಶ್ಚಿಮ ಬಂಗಾಳ ರಾಜ್ಯಕ್ಕೆ ಸಂಬಂಧಿಸಿ ದ್ದಾಗಿದ್ದಿತು. ಕಾರ್ಯಕ್ರಮದಲ್ಲಿ ಕೆಡೆಟ್ ಜತಿನ್ ಪೊನ್ನಪ್ಪ ಮತ್ತು ಕೆಡೆಟ್ ಯೊಹಾನ್ ಟಿ. ಜೋಸೆಫ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.