ಗೋಣಿಕೊಪ್ಪ ವರದಿ, ಏ. 14: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಏಕಕಾಲದಲ್ಲಿ ಬೇಸಿಗೆ ರಜೆಯನ್ನು ನೀಡಬೇಕೆಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಚೇಂದೀರ ಕಾವೇರಮ್ಮ ಒತ್ತಾಯಿಸಿದ್ದಾರೆ.

ಮಾತೃಪೂರ್ಣ ಯೋಜನೆಯನ್ನು ಚಾಲ್ತಿಯಲ್ಲಿಡಲು ಅಂಗನವಾಡಿ ನೌಕರರಿಗೆ ನೀಡುವ 15 ದಿನಗಳ ಬೇಸಿಗೆ ರಜೆಯನ್ನು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ವಿಭಾಗಿಸಿ ನೀಡಿರುವದರಿಂದ ನೌಕರರು ಒತ್ತಡದಿಂದ ಕೆಲಸ ಮಾಡಬೇಕಾಗಿದೆ. ಇಬ್ಬರು ನೌಕರರ ಕೆಲಸವನ್ನು ಒಬ್ಬ ನೌಕರರು ನಿರ್ವಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.