ಕುಶಾಲನಗರ, ಏ. 14: ಕೊಡವ ಸಂಸ್ಕøತಿ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಹಮ್ಮಿ ಕೊಳ್ಳಲಾಗುತ್ತಿದೆ ಎಂದು ಸಿಎನ್‍ಸಿ ಸಂಘಟನೆ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಹೇಳಿದರು.ಅವರು ಕೊಡವರ ನೂತನ ವರ್ಷ ಆಚರಣೆ ಎಡಮ್ಯಾರ್ ಅಂಗವಾಗಿ ಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಹೊಲದಲ್ಲಿ ಉಳುಮೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಅಲ್ಪಸಂಖ್ಯಾತ ಕೊಡವ ಜನಾಂಗಕ್ಕೆ ರಾಜ್ಯಾಂಗ ಖಾತ್ರಿ ನೀಡುವಂತಾಗಬೇಕು. ಕೊಡವ ಸಂಸ್ಕøತಿ ಬಹು ಸಂಖ್ಯಾತರ ಸಂಸ್ಕøತಿ ನಡುವೆ ನಶಿಸಿ ಹೋಗುವ ಆತಂಕ ಮೂಡಿದ್ದು ಈ ನಿಟ್ಟಿನಲ್ಲಿ ಕೊಡವ ಹಬ್ಬ ಹರಿದಿನಗಳನ್ನು ಬಹಿರಂಗವಾಗಿ ಆಚರಿಸಲಾಗುತ್ತಿದೆ. ಸಿಎನ್‍ಸಿ ಸಂಘಟನೆ ಹಲವು ವರ್ಷಗಳಿಂದ ಎಡಮ್ಯಾರ್ 1 ಆಚರಿಸಿಕೊಂಡು ಬರುತ್ತಿದೆ ಎಂದರು.
ಕೊಡವರಿಗೆ ಸಾಂವಿಧಾನಿಕ ಭದ್ರತೆ ಕೋರಿ ನಡೆಸುತ್ತಿರುವ ಹೋರಾಟ ತಾರ್ಕಿಕ ಅಂತ್ಯ ಕಾಣಲು ಹಾಗೂ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕೊಡವರ ಪ್ರಮುಖ ಆಚರಣೆಗಳಾದ ಕೈಲ್‍ಪೊಳ್ದ್, ಪುತ್ತರಿ, ಎಡಮ್ಯಾರ್ ಮತ್ತಿತರ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಆಚರಿಸಿ ಗಮನ ಸೆಳೆಯಲಾಗುತ್ತಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಟಿಪ್ಪು ಸುಲ್ತಾನ್ ಕೊಡವರ ನರಮೇಧ ನಡೆಸಿದ ದೇವಟ್‍ಪರಂಬ್‍ನಲ್ಲಿ ಹಿರಿಯರಿಗೆ ಪುಷ್ಪಾಂಜಲಿ ಸಲ್ಲಿಸಲಾಗಿದೆ. ಇದೇ ಜಾಗದಲ್ಲಿ ಜಾಗತಿಕ ಮಟ್ಟದ ಸ್ಮಾರಕ ನಿರ್ಮಾಣ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.
ಮನೆಯ ನೆಲ್ಲಕ್ಕಿಯಲ್ಲಿ ಗುರುಕಾರೋಣರಿಗೆ ಹಾಗೂ ಕಾವೇರಿ ಮಾತೆ, ಇಗ್ಗುತ್ತಪ್ಪ ದೇವರಿಗೆ ನಮನ ಸಲ್ಲಿಸಿ ಹಿರಿಯರಿಂದ ಆಶೀರ್ವಾದ ಪಡೆದು ನಂತರ ಗದ್ದೆಗೆ ತೆರಳಿ ಭೂಮಿಗೆ, ಸೂರ್ಯ ದೇವರಿಗೆ ಹಾಗೂ ಜೋಡೆತ್ತುಗಳಿಗೆ ನಮನ ಸಲ್ಲಿಸಿ ಧಾರ್ಮಿಕ ಪೂಜಾ ವಿಧಿ ವಿಧಾನಗಳ ನೆರವೇರಿಸಿ ಉಳುಮೆ ಕಾರ್ಯ ಕೈಗೊಂಡರು.
ಈ ಸಂದರ್ಭ ನಂದಿನೆರವಂಡ ವಿಜು ಅಚ್ಚಯ್ಯ, ಬೋಪಣ್ಣ ಇದ್ದರು