ಮಡಿಕೇರಿ, ಏ.14 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರರಾಗಿ ಆಪಟ್ಟಿರ ಟಾಟೂ ಮೊಣ್ಣಪ್ಪ ಅವರನ್ನು ಆಯ್ಕೆ ಮಾಡಿ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರೊ. ಕೆ.ಈ. ರಾಧಾಕೃಷ್ಣ ಆದೇಶ ಹೊರಡಿಸಿದ್ದಾರೆ.
ಒಂದು ಜಿಲ್ಲೆಗೆ ಒಬ್ಬರೇ ವಕ್ತಾರರು ಇರಬೇಕೆನ್ನುವ ನಿಯಮದ ಪ್ರಕಾರ ತಮ್ಮನ್ನು ವರಿಷ್ಠರು ವಕ್ತಾರನನ್ನಾಗಿ ಆಯ್ಕೆ ಮಾಡಿದ್ದು, ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಸಧ್ಯದಲ್ಲಿಯೇ ನೂತನ ವಕ್ತಾರರನ್ನು ಆಯ್ಕೆ ಮಾಡಲಿದ್ದೇನೆ ಎಂದು ಟಾಟೂ ಮೊಣ್ಣಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.