ವೀರಾಜಪೇಟೆ, ಏ. 14: ವೀರಾಜಪೇಟೆಯ ಸುಣ್ಣಬೀದಿಯಲ್ಲಿರುವ ಶ್ರೀ ತುಳಸಿ ಮಾರಿಯಮ್ಮ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಮಹಾಮುನೀಶ್ವರನಿಗೆ ವಿಶೇಷ ಪೂಜೆಗಳು ನಡೆದು ಬಳಿಕ ಮರುದಿನ ಕಾವೇರಿ ನದಿಯಲ್ಲಿ ಪೂಜೆ ಸಲ್ಲಿಸಿ ನಂತರ ತುಳಸಿ ಮಾರಿಯಮ್ಮ ಉತ್ಸವ ಮೂರ್ತಿಯ ಮೆರವಣಿಗೆಯು ದೇವಾಲಯದಿಂದ ಹೊರಟು ಪಟ್ಟಣದ ಮೊಗರಗಲ್ಲಿಯ ಮಾರ್ಗವಾಗಿ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬದ ಬಳಿಯಿಂದ, ಖಾಸಗಿ ಬಸ್ಸು ನಿಲ್ದಾಣ, ಸುಣ್ಣದಬೀದಿ ವರೆಗೆ ಪಟಾಕಿ ಸಿಡಿಸಿ ವಾಧ್ಯಗೋಷ್ಠಿಯೊಂದಿಗೆ ಅದ್ಧೂರಿಯ ಮೆರವಣಿಗೆ ನಡೆದು ಬಳಿಕ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
ದೇವಾಲಯದ ಸಭಾಂಗಣದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಬಳಿಕ ಪಂಗಲು ತಂಬಿಟ್ಟು ಹಾಗೂ ಅರತಿ ಪೂಜೆ, ಮಹಾಪೂಜೆ ಪ್ರಸಾದ ವಿನಿಯೋಗದ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ತುಳಸಿ ಮಾರಿಯಮ್ಮ (ಪಟ್ಟಲಮ್ಮ) ಸೇವಾ ಸಮಿತಿ ಸದಸ್ಯರು, ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು.