ನಾಪೆÇೀಕ್ಲು, ಏ. 15: ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಟ್ಟಮುಡಿ ಕಾವೇರಿ ನದಿ ಸೇತುವೆ ಬದಿ, ನದಿ ತೀರದಲ್ಲಿ ಕೋಳಿ, ಮಾಂಸ ಸೇರಿದಂತೆ ಮತ್ತಿತರ ತ್ಯಾಜ್ಯಗಳನ್ನು ಸುರಿಯುತ್ತಿರುವ ಕಾರಣ ಆ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ವಾಹನ ಸಂಚಾರ, ಜನ ಸಂಚಾರ ದುಸ್ತರ ಎಂಬಂತಾಗಿದೆ. ಕೂಡಲೇ ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳದಿದ್ದರೆ, ಉಗ್ರ ಹೋರಾಟ ನಡೆಸಲಾಗುವದು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಎಚ್ಚರಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗಿತ್ತು. ಅಧಿಕಾರಿಗಳು ದೂರನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ನೋಟೀಸು ನೀಡಿದ್ದರೂ ಅಧಿಕಾರಿಗಳು ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ನಾಪೆÉÇೀಕ್ಲು ಸಂತೆ ಸೇರಿದಂತೆ ಪಟ್ಟಣದ ತ್ಯಾಜ್ಯವನ್ನು ಕಾವೇರಿ ನದಿ ತೀರದಲ್ಲಿ ಸುರಿಯಲಾಗುತ್ತಿದೆ. ಇದು ಮಳೆ ನೀರಿನೊಂದಿಗೆ ಕಾವೇರಿ ಒಡಲು ಸೇರುತ್ತಿದೆ. ಇದರ ಕೆಳಭಾಗದಿಂದ ನಾಪೆÇೀಕ್ಲು ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಅಮಾಯಕ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವ ಬೀಗ್ರೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಕಾವೇರಿ ನದಿ ಶುದ್ಧೀಕರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಅದರೊಂದಿಗೆ ನಾಪೆÇೀಕ್ಲು ಗ್ರಾಮ ಪಂಚಾಯಿತಿಯ ಕೊಟ್ಟಮುಡಿ ಬಳಿ ಮಾತೆ ಕಾವೇರಿಯ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸುವದು ಒಳಿತು ಎಂದರಲ್ಲದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಪುಲ್ಲೇರ ಪಳಂಗಪ್ಪ, ನೆಡುಮಂಡ ಕೃತಿ, ತಟ್ಟಂಡ ಗಂಗಮ್ಮ, ನಾಗರಾಜ ಇದ್ದರು.