ಕೂಡಿಗೆ, ಏ. 15: ಇಲ್ಲಿನ ಸೈನಿಕ ಶಾಲೆಯಲ್ಲಿ 2018-19ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾ ರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಜೀನ್ ಜೇಸುದಾಸ್, ಐ.ಆರ್.ಎಸ್. ಉಪ ಆಯುಕ್ತರು, ನಾರ್ಕೋಟಿಕ್ಸ್ ಮತ್ತು ಜಿ.ಎಸ್.ಟಿ. ವಿಭಾಗ, ಮೈಸೂರು ಇವರು ಆಗಮಿಸಿದ್ದರು. ಈ ಸಂದರ್ಭ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಮತ್ತು ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಮುಖ್ಯ ಅತಿಥಿಗಳು ಜ್ಯೋತಿ ಬೆಳಗುವದರ ಮೂಲಕ ಚಾಲನೆ ನೀಡಿದರು. ಮುಖ್ಯ ಅತಿಥಿಗಳು ನೂತನ ಭುಜದ ಮೇಲಿನ ಬ್ಯಾಡ್ಜ್ಗಳನ್ನು ಅನಾವರಣ ಗೊಳಿಸುವದರ ಮೂಲಕ ಜವಾಬ್ದಾರಿಗಳನ್ನು ನೀಡಿದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳ ನಾಯಕನಾಗಿ ಕೆಡೆಟ್ ಶಯನ್ ಸೋಮಣ್ಣ, ಶಾಲಾ ಶಿಸ್ತಿನ ನಾಯಕನಾಗಿ ಕೆಡೆಟ್ ರಾಹುಲ್ ಕುಮಾರ್, ಸಾಂಸ್ಕøತಿಕ ಕಾರ್ಯಕ್ರಮಗಳ ನಾಯಕನಾಗಿ ಕೆಡೆಟ್ ವಿನಾಯಕ್ ಹೆಬ್ಬಾಲೆ, ಭೋಜನಾಲಯದ ನಾಯಕನಾಗಿ ಕೆಡೆಟ್ ಅಕ್ಷಯ್ ಗುಮ್ಮಾ, ಕ್ರೀಡಾ ನಾಯಕನಾಗಿ ಕೆಡೆಟ್ ಶಿವಕುಮಾರ್ ಸೊರಾತಾನಿ ಜವಾಬ್ದಾರಿ ವಹಿಸಿಕೊಂಡರು. ಇದರೊಂದಿಗೆ ಉಪ ನಾಯಕರುಗಳು ಹಾಗೂ ವಿವಿಧ ನಿಲಯಗಳ ನಾಯಕರುಗಳ ಪದಗ್ರಹಣವು ಜರುಗಿತು. ನಂತರ ಶಾಲೆಯ ವಿದ್ಯಾರ್ಥಿಗಳ ಶಿಸ್ತಿನ ನಾಯಕ ಕೆಡೆಟ್ ರಾಹುಲ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭ ಮಾತನಾಡಿದ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು ಹಾಗೂ ಅದೇ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕೆಂದು ತಿಳಿಸಿದರು. ಹಾಗೆಯೇ ಹೆಚ್ಚು ಜ್ಞಾನವನ್ನು ಸಂಪಾದಿಸುವದರ ಮೂಲಕ ದೇಶ ಸೇವೆಗೆ ಕಟಿಬದ್ಧರಾಗಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೆಡೆಟ್ ಅಜೀಮ್ ಸ್ವಾಗತಿಸಿ, ಕೆಡೆಟ್ ಶ್ರೀಹಿತ್ ರೆಡ್ಡಿ ಮತ್ತು ಕೆಡೆಟ್ ಹೃದ್ಯ ಅಶೋಕ್ ನಿರೂಪಿಸಿದರೆ, ಕೆಡೆಟ್ ಪೃಥ್ವಿ ಶಿವಧೆ ವಂದಿಸಿದರು.