ನಾಪೆÇೀಕ್ಲು, ಏ. 15: ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಇಂಡಿಯಾ ಮತ್ತು ಕುಲ್ಲೇಟಿರ ಕುಟುಂಬದ ಆಶ್ರಯದಲ್ಲಿ ಕೌಟುಂಬಿಕ ಹಾಕಿ ನಮ್ಮೆ ಕುಲ್ಲೇಟಿರ ಕಪ್ 2018ಕ್ಕೆ ನಾಪೆÇೀಕ್ಲು ಚೆರಿಯಪರಂಬು ಕಾವೇರಿ ತೀರದಲ್ಲಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.ಕೊಡವ ಸಾಂಪ್ರದಾಯಿಕ ಉಡುಗೆ, ತೊಡುಗೆ, ತಳಿಯಕ್ಕಿ ಬೊಳಕ್, ಕೊಂಬ್ ಕೊಟ್ಟು ಓಲಗದೊಂದಿಗೆ ಅತಿಥಿಗಳನ್ನು ಮೆರವಣಿಗೆಯಲ್ಲಿ ವೇದಿಕೆಗೆ ಆಹ್ವಾನಿಸುವದರ ಮೂಲಕ ಭವ್ಯ ಸ್ವಾಗತ ಕೋರಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಅಡಿಷನಲ್ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟಿರ ಪೆÇನ್ನಣ್ಣ ಮಾತನಾಡಿ ಕೊಡವರ ಸಂಸ್ಕøತಿ, ಪದ್ಧತಿ, ಆಚಾರ-ವಿಚಾರಗಳ ಬಗ್ಗೆ ವಿಶ್ವದಲ್ಲಿ ಖ್ಯಾತಿ ಇದೆ. ಆದರೆ ನಮ್ಮ ಜನಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಒಟ್ಟು 1.68 ಲಕ್ಷ ಜನ ಮಾತ್ರ ಇದ್ದಾರೆ. ಅದರಲ್ಲಿ ಕೊಡಗಿನಲ್ಲಿರುವವರು 60 ಸಾವಿರ ಜನ ಮಾತ್ರ. ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ವಿನಾಶ ಖಂಡಿತ ಎಂದು ಎಚ್ಚರಿಸಿದರು.

ಕೊಡವರ ಸಂಸ್ಕøತಿ ವಿಭಿನ್ನವಾಗಿದೆ ಎಂದು ಹೇಳಿಕೊಂಡರೆ ಸಾಲದು. ಸಂಸ್ಕøತಿಯ ಮತ್ತು ಜನಾಂಗದ ರಕ್ಷಣೆಯನ್ನು ಮಾಡಿಕೊಳ್ಳುವ ಹೊಣೆ ಕೂಡ ನಮ್ಮ ಮೇಲಿದೆ ಎಂದರು. ಕೊಡವರ ಒಡಿಕತ್ತಿ, ಪೀಚೆಕತ್ತಿ ನಮ್ಮ ಸಂಸ್ಕøತಿಯ ಅಂಗ ಮತ್ತು ಲಾಂಛನವಾಗಿದೆ. ಸಂಸ್ಕøತಿಯ ರಕ್ಷಣೆಯ ನಿಟ್ಟಿನಲ್ಲಿ ಹಾಕಿ ನಮ್ಮೆ ಮಹತ್ವ ಪಡೆದಿದೆ ಎಂದರು.

ಮಾಜಿ ಒಲಂಪಿಯನ್ ಮೊಳ್ಳೆರ ಪಿ. ಗಣೇಶ್ ಮಾತನಾಡಿ ಹೆಣ್ಣು ಮಕ್ಕಳಿಗೆ ಪ್ರೊತ್ಸಾಹ ನೀಡದಿದ್ದರೆ ಕ್ರೀಡೆ ಮುಂದುವರಿಯಲು ಸಾಧ್ಯವಿಲ್ಲ. ಭಾರತೀಯ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳು ಇಂದು ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಇಂದು ಭಾರತೀಯ ಹಾಕಿ ತಂಡವನ್ನು ಕೊಡಗಿನಿಂದ ಎಸ್.ವಿ. ಸುನಿಲ್ ಮಾತ್ರ ಪ್ರತಿನಿಧಿಸುತ್ತಿದ್ದಾರೆ. ಯಾವದೇ ಕೊಡವ ಆಟಗಾರರೂ ಇಲ್ಲ. ಜಿಲ್ಲೆಯ ಯುವ ಪ್ರತಿಭೆಗಳನ್ನು ಗುರುತಿಸಿ,

(ಮೊದಲ ಪುಟದಿಂದ) ಸೂಕ್ತ ತರಬೇತಿ ನೀಡಿ ಉತ್ತಮ ಆಟಗಾರರನ್ನು ಭಾರತೀಯ ತಂಡಕ್ಕೆ ಸೇರ್ಪಡೆಗೊಳಿಸಬೇಕು ಎಂದರು. ಹಾಕಿ ನಮ್ಮೆಯ ಹಣಕಾಸಿನ ವ್ಯವಹಾರ ಸರಿಯಾಗಿರಬೇಕು. ಇದರಿಂದ ಕುಟುಂಬಗಳ ನಡುವೆ ಮತ್ತೆ ಬಿರುಕು ಮೂಡಬಾರದು. ಕೊಡವರ ಹೆಸರಿಗೆ ಕಳಂಕ ಬರಬಾರದು ಎಂದು ಈ ಸಂದರ್ಭದಲ್ಲಿ ಅವರು ಸಲಹೆ ನೀಡಿದರು.

ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ಸಿ.ನಾಣಯ್ಯ ಮಾತನಾಡಿ 22ನೇ ವರ್ಷದ ಹಾಕಿ ನಮ್ಮೆಯೊಂದಿಗೆ ಮುಂದಿನ ಎಲ್ಲಾ ಹಾಕಿ ನಮ್ಮೆಗಳೂ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.

ಪಡೆಬೀರ ಕುಲ್ಲೇಟಿರ ಪೆÇನ್ನಣ್ಣ ಪುಸ್ತಕದ ಬಗ್ಗೆ ಮಾತನಾಡಿದ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಕುಲ್ಲೇಟಿರ ಪೆÇನ್ನಣ್ಣ ಅವರ ಪರಾಕ್ರಮ ಅವರ ಕುಟುಂಬಕ್ಕೆ ಮಾತ್ರ ಸೀಮಿತವಲ್ಲ. ಇಡೀ ಕೊಡಗಿನ ಕೊಡವರನ್ನು ರಕ್ಷಣೆ ಮಾಡಿದ ಕೀರ್ತಿ ಅವರಿಗಿದೆ. ಆದ್ದರಿಂದ ನಾಪೆÇೀಕ್ಲು ಪಟ್ಟಣದ ಒಂದು ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೆÉೀಕು ಎಂದು ಸಲಹೆ ನೀಡಿದರು.

ಕುಲ್ಲೇಟಿರ ಹಾಕಿ ನಮ್ಮೆ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ ಮಾತನಾಡಿ ಒಂದು ಕುಟುಂಬದಿಂದ ಹಾಕಿ ನಮ್ಮೆ ನಡೆಸಲು ಸಾಧ್ಯವಿಲ್ಲ. ತನು, ಮನ, ಧನ ಸಹಾಯ ಮಾಡಿದ ಎಲ್ಲರಿಗೂ ನಾವು ಆಭಾರಿ ಎಂದರು.

ಕುಲ್ಲೇಟಿರ ಅರುಣ್ ಬೇಬ ಕುಲ್ಲೇಟಿರ ಕುಟುಂಬ ಪರಿಚಯ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ವೆಸ್ಟ್ ಕೊಳಕೇರಿ ಶ್ರೀ ಪೊವ್ವದಿ ಪೊಮ್ಮಕ್ಕಡ ಕೂಟದಿಂದ ಉಮ್ಮತಾಟ್, ನಾಪೆÇೀಕ್ಲು ಶ್ರೀ ಭಗವತಿ ಯುವಕ ಸಂಘದಿಂದ ಬೊಳಕಾಟ್, ಗೋಣಿಕೊಪ್ಪ ಕಾವೇರಿ ಕಾಲೇಜು ಬಾಲಕರಿಂದ ಕೋಲಾಟ್ ಪ್ರದರ್ಶನ ನಡೆಯಿತು. ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಬರೆದ ಪಡೆಬೀರ ಕುಲ್ಲೇಟಿರ ಪೆÇನ್ನಣ್ಣ ಪುಸ್ತಕವನ್ನು ಮಾಜಿ ಒಲಂಪಿಯನ್ ಎಂ.ಪಿ.ಗಣೇಶ್ ಬಿಡುಗಡೆ ಗೊಳಿಸಿದರು.

ಇಂಡಿಯಾ ಒಲಂಪಿಯನ್ ಮತ್ತು ಕೂರ್ಗ್ ಇಲವೆನ್ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಇಂಡಿಯಾ ಒಲಂಪಿಯನ್ ತಂಡ ಒಂದು ಗೋಲಿನಿಂದ ಕೂರ್ಗ್ ಇಲವೆನ್ ತಂಡವನ್ನು ಪರಾಭವಗೊಳಿಸಿತು. ಪ್ರದರ್ಶನ ಪಂದ್ಯವನ್ನು ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ನಾಣಯ್ಯ ಉದ್ಘಾಟಿಸಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲ್ಲೇಟಿರ ಕುಟುಂಬದ ಪಟ್ಟೆದಾರ ಮಾದಪ್ಪ, ಹಾಕಿ ಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ, ಮಾಜಿ ಒಲಂಪಿಯನ್ ಬಾಳೆಯಡ ಪೂಣಚ್ಚ, ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಹಿರಿಯರಾದ ಬಿದ್ದಾಟಂಡ ಪ್ರೊ. ಪೆÇನ್ನಪ್ಪ, ಐ.ಎ.ಎಸ್ ಅಧಿಕಾರಿ ರಾಜಕುಮಾರ್ ಖತ್ರಿ ಮತ್ತಿತರರು ಇದ್ದರು.