ಮೂರ್ನಾಡು, ಏ. 15: ಸಮಾಜಕ್ಕೆ ನಿಸ್ವಾರ್ಥ ಸೇವೆಗೈಯಲು ಲಯನ್ಸ್ ಸಂಸ್ಥೆಯ ಸದಸ್ಯರು ಮುಂದಾಗುವದರೊಂದಿಗೆ, ಸಂಸ್ಥೆಗೆ ನೂತನ ಸದಸ್ಯರುಗಳನ್ನು ಸೇರ್ಪಡೆ ಗೊಳಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಲಯನ್ಸ್ ಕ್ಲಬ್‍ನ ಜಿಲ್ಲಾ ಗವರ್ನರ್ ಎಚ್.ಆರ್. ಹರೀಶ್ ಎಂಜೆಎಫ್ ಹೇಳಿದರು.
ಮೂರ್ನಾಡು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ಕ್ಲಬ್‍ನ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಹೆಚ್ಚು ಕ್ರಿಯಾಶೀ¯ವಾಗಿರಲು ಹೆಚ್ಚು ಹೆಚ್ಚು ನೂತನ ಸದಸ್ಯರು ಸೇರ್ಪಡೆ ಗೊಳ್ಳಬೇಕು. ಆಗ ಮಾತ್ರ ಕ್ಲಬ್‍ನಿಂದ ಸಮಾಜಮುಖಿ ಕಾರ್ಯ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂರ್ನಾಡು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಅಮ್ಮಾಟ್ಟಂಡ ಚಂಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ವಸಂತ್ ಶೆಟ್ಟಿ, ಜಿಲ್ಲಾ ಎಲ್‍ಪಿಎಲ್ ಸಂಯೋಜಕ ಶ್ರೀನಿವಾಸ್ ಪೂಜಾರಿ, ಜಿಎಸ್‍ಟಿ ಶಶಿಧರ್ ಮಾರ್ಲ, ಜಿಆರ್‍ಆರ್ ಸ್ವರೂಪ್ ಅಯ್ಯಪ್ಪ, ಪ್ರಾಂತೀಯ ಅಧ್ಯಕ್ಷೆ ರತ್ನ ಚರ್ಮಣ್ಣ, ವಲಯಾಧ್ಯಕ್ಷ ಅಚ್ಚಯ್ಯ, ಮೂರ್ನಾಡು ಲಯನ್ಸ್ ಕ್ಲಬ್‍ನ ಕಾರ್ಯದರ್ಶಿ ಬಿದ್ದಂಡ ಗಗನ್ ಮುತ್ತಣ್ಣ, ಖಜಾಂಚಿ ಪ್ರಕಾಶ್ ಕಾವೇರಪ್ಪ, ಜಿಲ್ಲಾ ಪ್ರಥಮ ಮಹಿಳೆ ನಮಿತ ಹರೀಶ್, ಕ್ಲಬ್‍ನ ಪ್ರಥಮ ಮಹಿಳೆ ಡಯಾನ ಕಾವೇರಮ್ಮ ಉಪಸ್ಥಿತರಿದ್ದರು. ಕನ್ನು ಅಪ್ಪಚ್ಚು ಪ್ರಾರ್ಥಿಸಿ, ಅಮ್ಮಾಟ್ಟಂಡ ಚಂಗಪ್ಪ ಸ್ವಾಗತಿಸಿ, ಬಿದ್ದಂಡ ಗಗನ್ ಮುತ್ತಣ್ಣ ವಂದಿಸಿದರು.