ಮಡಿಕೇರಿ, ಏ. 15: ಪುತ್ತೂರಿನ ಸಂತಫಿಲೋಮಿನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜೂನಿಯರ್ ಅಂಡರ್ ಆಫೀಸರ್ ಜೋವಿನ್ ಅವರನ್ನು ಸನ್ಮಾನಿಸಲಾಯಿತು.
2015ರಲ್ಲಿ ಜೂನಿಯರ್ ಅಂಡ್ ಆಫೀಸರ್ ಆಗಿದ್ದ ಸಂದರ್ಭ ದೆಹಲಿಯಲ್ಲಿ ನಡೆದ ಪಥ ಸಂಚಲನದಲ್ಲಿ ಭಾಗವಹಿಸುವ ಅವಕಾಶವನ್ನು ಜೋವಿನ್ ಜೋಸೆಫ್ ಪಡೆದಿದ್ದರು. ಪ್ರಸ್ತುತ ಸೀನಿಯರ್ ಅಂಡರ್ ಆಫೀಸರಾಗಿ 2ನೇ ಬಾರಿಗೆ ಪಥ ಸಂಚಲನದಲಿ ಭಾಗವಹಿಸಿದ್ದಾರೆ.
ಕಾಲೇಜಿನ ಶೈಕ್ಷಣಿಕ ವರ್ಷದ ಬೆಸ್ಟ್ ಎನ್ಸಿಸಿ ಆಲ್ರೌಂಡರ್ ಪ್ರಶಸ್ತಿ ಪಡೆದಿರುವ ಜೂನಿಯರ್ ಅಂಡರ್ ಆಫೀಸರ್ ಮತ್ತು ಎನ್ಸಿಸಿ ಪದಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೋವಿನ್ ಜೋಸೆಫ್ ರಾಜಪಥದ ಸಂಚಲನದಲ್ಲಿ ಲೈನ್ಹೆಡ್ (ರೈಟ್ ಮಾರ್ಕರ್) ಕರ್ತವ್ಯ ನಿರ್ವಹಿಸಿದ್ದರು.
ಇವರು ಮಡಿಕೇರಿಯ ಸಂತ ಜೋಸೆಫರ ಸಂಯುಕ್ತ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿರುವ ಜೋಸೆಫ್ ಶಾಂತರಾಜ್ ಹಾಗೂ ನ್ಯಾನ್ಸಿಶೀಲ ದಂಪತಿಯ ಪುತ್ರ.