ಗೋಣಿಕೊಪ್ಪ ವರದಿ, ಏ. 15: ಕೊಡವರ ಹೊಸ ವರ್ಷ ಎಡಮ್ಯಾರ್ ಅಂಗವಾಗಿ ಸಿ.ಎನ್.ಸಿ ಆಶ್ರಯದಲ್ಲಿ ಗೋಣಿಕೊಪ್ಪಲಿನ ಆರ್.ಎಂ.ಸಿ ಯಾರ್ಡ್‍ನಿಂದ ಪರಿಮಳ ಮಂಗಳ ವಿಹಾರದವರೆಗೆ ಪಂಜಿನ ಮೆರವಣಿಗೆ ನಡೆಯಿತು.ಮುಖ್ಯ ರಸ್ತೆಯಲ್ಲಿ ಸಾಗಿದ ಬೃಹತ್ ಪಂಜಿನ ಮೆರವಣಿಗೆ ಸಾಗಿದ ಸಿಎನ್‍ಸಿ ತಂಡ ಬಸ್ಸು ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು. ಸಿ.ಎನ್.ಸಿ ಅಧ್ಯಕ್ಷ ನಾಚಪ್ಪ ಮಾತನಾಡಿ ಭೂಮಿತಾಯಿ ಹಾಗೂ ಕೊಡವರ ಮಧ್ಯೆ ಇರುವ ಪಾರಂಪರಿಕ ಮತ್ತು ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸುವದರ ಮೂಲಕ ಮುಂದಿನ ಪೀಳಿಗೆಗೆ ಕೊಡವರ ಸಂಸ್ಕøತಿ ಮತ್ತು ನಾಗರೀಕತೆಯ ಮೌಲ್ಯಗಳನ್ನು ಬಳುವಳಿಯಾಗಿ ವರ್ಗಾಯಿಸುವ ಸಂದೇಶವನ್ನು ಎಡಮ್ಯಾರ್ ನಮ್ಮೆ ಸಾರುತ್ತದೆ ಎಂದು ಹೇಳಿದರು. ಕೊಡವರ ಎಲ್ಲಾ ರಾಜ್ಯಾಂಗದತ್ತ ಹಕ್ಕೊತ್ತಾಯಗಳಾದ ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ರಚನೆ, ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನ ಭದ್ರತೆ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳಿಸಲು ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಶಾಸನ ಬದ್ದ ಹಕ್ಕೊತ್ತಾಯದ ತೀವ್ರತೆಯ ಸಂದೇಶವನ್ನು ಸರಕಾರಕ್ಕೆ ತಲಪಿಸುವ ಉದ್ದೇಶದಿಂದ ಪಂಜಿನ ಮೆರವಣಿಗೆಯನ್ನು ಆಯೋಜಿಸಿರು ವದಾಗಿ ತಿಳಿಸಿದರು.