ಸೋಮವಾರಪೇಟೆ, ಏ. 15: ತಾಲೂಕು ಹಿರಿಯ ನಾಗರಿಕರ ಸೇವಾ ಟ್ರಸ್ಟ್‍ನ ಅಧ್ಯಕ್ಷರಾಗಿ ಎಂ.ಟಿ.ದಾಮೋಧರ್ ಆಯ್ಕೆಯಾಗಿದ್ದಾರೆ.

ಗೌರವ ಕಾರ್ಯದರ್ಶಿಗಳಾಗಿ ಸಿ.ಕೆ. ಮಲ್ಲಪ್ಪ, ಉಪಾಧ್ಯಕ್ಷರುಗಳಾಗಿ ಎಸ್.ಪಿ. ಪ್ರಸನ್ನ ಮತ್ತು ಎನ್.ಬಿ. ನಾಗಪ್ಪ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಗಳಾಗಿ ಹೆಚ್.ಸಿ. ಚಂಗಪ್ಪ, ಖಜಾಂಜಿಯಾಗಿ ಕೆ.ಎನ್. ಶಿವಕುಮಾರ್ ಅವರನ್ನು ನೇಮಕ ಮಾಡಲಾಯಿತು. ನಿರ್ದೇಶಕರುಗಳಾಗಿ ಎಸ್.ಬಿ. ಲೀಲಾರಾಮ್, ಜೋಕಿಮ್ ವಾಸ್, ಕೆ.ಎಸ್. ವಿಷಕಂಠ, ಕೆ.ಬಿ. ಅಜಯ್ ಕುಮಾರ್, ಹೆಚ್.ಸಿ. ನಾಗೇಶ್, ಎಂ.ಎಲ್. ಉಮೇಶ್ ಮತ್ತು ಬಿ.ಎಸ್. ಸುದೀಪ್ ಅವರನ್ನು ನೇಮಿಸಲಾಯಿತು.