ಮಡಿಕೇರಿ, ಏ. 16: 3 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಕಾವೇರಿ ನದಿ ಸ್ವಚ್ಛತೆ ಮಾಡಿದ ಯುವ ಬ್ರಿಗೇಡ್ ತಂಡ ಗಡಿಯ ರಾಮನಾಥಪುರದಲ್ಲಿ ತನ್ನ ಸೇವಾ ಕಾರ್ಯವನ್ನು ಮುಂದುವರಿಸಿತು. ಕಾವೇರಿ ನದಿ ತಟ ಸೇರಿದಂತೆ ಎಲ್ಲೆಂದರಲ್ಲಿ ಬಟ್ಟೆ, ಚಪ್ಪಲಿಗಳು, ದೇವರ ಚಿತ್ರಗಳನ್ನು ಬಿಸುಟು, ಕಲುಷಿತ ಮಾಡಿದವರ ಬಗ್ಗೆ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.(ಮೊದಲ ಪುಟದಿಂದ) ಪಾಪ ಪರಿಹಾರಕ್ಕೆ ಬರುವ ಭಕ್ತರು ತಾಯಿ ಕಾವೇರಿಯನ್ನು ಹಾಳುಗೆಡುತ್ತಿದ್ದರೆ ‘ಮಹಾಪಾಪ’ ಕಾಡುತ್ತದೆ ಎಂದು ಎಚ್ಚರಿಸಿದರು. ಪುಣ್ಯ ಕ್ಷೇತ್ರ ರಾಮನಾಥಪುರದಲ್ಲಿ ನದಿಯ ಸ್ವಚ್ಛತೆಗೆ ಸಂಬಂಧಿಸಿದವರು ಆಸಕ್ತಿ ತೋರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಶ್ರೀರಂಗಪಟ್ಟಣಶ್ರೀರಂಗಪಟ್ಟಣದ ಸ್ನಾನ ಘಟ್ಟ, ಪಶ್ಚಿಮವಾಹಿನಿ, ನಿಮಿಷಾಂಭ ದೇವಾಲಯದ ಸುತ್ತಲೂ ತಾ. 15 ರಂದು ಕಾವೇರಿ ಸ್ವಚ್ಛತೆ ನಡೆಯಿತು. 250 ಸ್ವಯಂ ಸೇವಕರು ಪಾಲ್ಗೊಂಡಿದ್ದರು.ಒಟ್ಟು 5 ದಿನಗಳ ಕಾಲ ತಲಕಾವೇರಿಯಿಂದ ಶ್ರೀರಂಗಪಟ್ಟಣದ ವರೆಗೆ 7 ಕಡೆಗಳಲ್ಲಿ ನಡೆದ ಆಂದೋಲನದಲ್ಲಿ 100 ಟ್ರ್ಯಾಕ್ಟರ್ ಗಳಿಗೂ ಹೆಚ್ಚು ಕಸ ವಿಲೇವಾರಿ ಮಾಡಲಾಯಿತು.