ಮಡಿಕೇರಿ, ಏ. 16: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿಂದು ಕುದುಪಜೆ, ಕೋಳುಮುಡಿಯನ, ಪರ್ಲಕೋಟಿ ಸೇರಿದಂತೆ 8 ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯದಲ್ಲಿ ಉಡುದೋಳಿರ ತಂಡ 2 ವಿಕೆಟ್ಗೆ 60 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕೇಚಪ್ಪನ ತಂಡ 8 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿ 24 ರನ್ಗಳ ಅಂತರದಿಂದ ಸೋಲನುಭವಿಸಿತು. ನಿಡ್ಯಮಲೆ ‘ಎ’ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 22 ರನ್ ಮಾತ್ರ ಗಳಿಸಿದರೆ, ಪೇರಿಯನ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕಡ್ಯದ ತಂಡ 5 ವಿಕೆಟ್ಗೆ 75 ರನ್ ಗಳಿಸಿದರೆ, ನಂಗಾರು ತಂಡ 4 ವಿಕೆಟ್ ಕಳೆದುಕೊಂಡು 65 ರನ್ ಮಾತ್ರ ಗಳಿಸಿ 7 ರನ್ಗಳ ಅಂತರದಿಂದ ಸೋಲನುಭವಿಸಿತು. ಕುದುಪಜೆ ತಂಡ 5 ವಿಕೆಟ್ಗೆ 55 ರನ್ ಗಳಿಸಿದರೆ, ದಾಯನ ತಂಡ 6 ವಿಕೆಟ್ಗೆ 50 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಮಂದ್ರಿರ ತಂಡ 4 ವಿಕೆಟ್ಗೆ 50 ರನ್ ಗಳಿಸಿದರೆ, ಯಾಲದಾಳು ತಂಡ ಕೇವಲ 1 ವಿಕೆಟ್ ಕಳೆದುಕೊಂಡು 9 ವಿಕೆಟ್ಗಳ ಜಯ ಸಂಪಾದಿಸಿತು. ಕೊಂಬನ ತಂಡ 4 ವಿಕೆಟ್ಗೆ 50 ರನ್ ಗಳಿಸಿದರೆ, ಕೆದಂಬಾಡಿ ‘ಎ’ ತಂಡ 6 ವಿಕೆಟ್ ಕಳೆದುಕೊಂಡು 4 ವಿಕೆಟ್ಗಳ ಜಯ ಸಂಪಾದಿಸಿತು. ಪರ್ಲಕೋಟಿ ತಂಡ 4 ವಿಕೆಟ್ಗೆ 73 ರನ್ ಗಳಿಸಿದರೆ, ಪೇರಿಯನ ತಂಡ 4 ವಿಕೆಟ್ ಕಳೆದುಕೊಂಡು 45 ರನ್ ಮಾತ್ರ ಗಳಿಸಿ 28 ರನ್ಗಳ ಅಂತರದಿಂದ ಸೋಲನುಭವಿಸಿತು.
ಕೋಳುಮುಡಿಯನ ತಂಡ 3 ವಿಕೆಟ್ಗೆ ಭರ್ಜರಿ 112 ರನ್ ಪೇರಿಸಿದರೆ, ಉತ್ತರವಾಗಿ ಆಡಿದ ಚಿಲ್ಲನ ತಂಡ 5 ವಿಕೆಟ್ಗೆ 64 ರನ್ ಮಾತ್ರ ಗಳಿಸಿ 48 ರನ್ಗಳ ಅಂತರದಿಂದ ಸೋಲನುಭವಿಸಿತು. ಕೋಳುಮುಡಿಯನ ತಂಡದ ಪರ ಮೋಹನ್ 50, ಅಚಲ್ 36, ಮಧು 25 ರನ್ಗಳನ್ನು ಗಳಿಸಿ ಗಮನ ಸೆಳೆದರು. ಕಡ್ಯದ ಹಾಗೂ ಯಾಲದಾಳು ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಕಡ್ಯದ ತಂಡ 5 ವಿಕೆಟ್ಗೆ 45 ರನ್ ಗಳಿಸಿದರೆ, ಯಾಲದಾಳು ತಂಡ 9 ವಿಕೆಟ್ ಕಳೆದುಕೊಂಡು 30 ರನ್ ಮಾತ್ರ ಗಳಿಸಿ 15 ರನ್ಗಳ ಅಂತರದಿಂದ ಸೋಲನುಭವಿಸಿತು. ಕುದುಪಜೆ ಹಾಗೂ ಉಡುದೊಳಿರ ತಂಡ ನಡುವಿನ ಪಂದ್ಯದಲ್ಲಿ ಕುದುಪಜೆ ತಂಡ 6 ವಿಕೆಟ್ಗೆ 75 ರನ್ ಗಳಿಸಿದರೆ, ಉಡುದೊಳಿರ ತಂಡ 8 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿ ಸೋಲನುಭವಿಸಿತು. ತೇಲಬೈಲು ತಂಡ 6 ವಿಕೆಟ್ಗೆ 68 ರನ್ ಗಳಿಸಿದರೆ ಅಮ್ಮವ್ವನ ತಂಡ 8 ವಿಕೆಟ್ಗೆ 55 ರನ್ ಗಳಿಸಿ 15 ರನ್ಗಳ ಅಂತರದಿಂದ ಸೋಲನುಭವಿಸಿತು.
ರಕ್ತದಾನ ಶಿಬಿರ
ತಾ.18ರಂದು (ನಾಳೆ) ಬೆಳಿಗ್ಗೆ 9 ಗಂಟೆಗೆ ರೋಟರಿ ಮಿಸ್ಟಿಹಿಲ್ಸ್ ಹಾಗೂ ಚೆರಿಯಮನೆ ಕುಟುಂಬಸ್ಥರ ಸಹಯೋಗದಲ್ಲಿ ಕೊಡಗು ಯುವ ವೇದಿಕೆ ವತಿಯಿಂದ ನಡೆಯಲಿರುವ ರಕ್ತದಾನ ಶಿಬಿರವನ್ನು ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಉದ್ಘಾಟಿಸಲಿದ್ದು, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಕರುಂಬಯ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 9.30 ಗಂಟೆಗೆ ನೇತ್ರ ತಪಾಸಣಾ ಶಿಬಿರವನ್ನು ನೇತ್ರ ತಜ್ಞ ಡಾ. ಚೆರಿಯಮನೆ ಆರ್. ಪ್ರಶಾಂತ್ ಅವರು ಉದ್ಘಾಟಿಸಲಿದ್ದು, 10 ಗಂಟೆಗೆ ಮಧುಮೇಹ ಶಿಬಿರವನ್ನು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ನೆರಿಯನ ನವೀನ್ ಕುಮಾರ್ ಉದ್ಘಾಟಿಸಲಿದ್ದಾರೆ.