ಸಿದ್ದಾಪುರ, ಏ. 16: ಕ್ಯಾಥೋಲಿಕ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಶಾಲನಗರದ ಸಂತ ಸಬಾಸ್ಟೀನ್ ಚರ್ಚ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ವೀರಾಜಪೇಟೆಯ ಸಂತ ಆ್ಯನ್ಸ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸಂತ ಮರಿಯಮ್ಮನರ ಫರೋನ ದೇವಾಲಯ (ಬೆಳ್ತಂಗಡಿ ಧರ್ಮಪ್ರಾಂತ್ಯ) ಸಿದ್ದಾಪುರ ಇವರ ವತಿಯಿಂದ ಹಮ್ಮಿಕೊಂಡಿದ್ದ 7ನೇ ವರ್ಷದ ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ ಟೆನ್ನಿಸ್ಬಾಲ್ ಪಂದ್ಯಾಟವು ಸಿದ್ದಾಪುರದ ಆದಿಚುಂಚನಗಿರಿ ಶೈಕ್ಷಣಿಕ ಶಾಲಾ ಮೈದಾನದಲ್ಲಿ 3 ದಿನಗಳ ಕಾಲ ನಡೆಯಿತು. ತೃತೀಯ ಸ್ಥಾನವನ್ನು ಮಡಿಕೇರಿಯ ಸಂತ ಮೈಕಲರ ತಂಡ ಪಡೆದುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಿಪಿಐಎಂ ಡಾ. ಐ.ಆರ್. ದುರ್ಗಾಪ್ರಸಾದ್, ಜಿಲ್ಲಾ ಕ್ಯಾಥೋಲಿಕ್ ಸಂಘದ ಅಧ್ಯಕ್ಷ ಜೋಸೆಫ್ ಶ್ಯಾಂ, ಸಂತ ಮರಿಯಮ್ಮ ರವರ ಫರೋನ ದೇವಾಲಯದ ಧರ್ಮಗುರು ಮಾಣಿ ಕಾರ್ಯ ಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮ ದಲ್ಲಿ ಆ್ಯಂಟೋನಿ, ಬೆನ್ನಿ ಥೋಮಸ್, ಸಾಬು ವರ್ಗೀಸ್, ಪಿಲೀಫ್, ಸಾಜು, ಪಿಂಟೋ ಇನ್ನಿತರರು ಹಾಜರಿದ್ದರು. ವಿನೀಲ್ ಜೋಸೆಫ್ ಸ್ವಾಗತಿಸಿ, ವಂದಿಸಿದರು.