ಕರಿಕೆ, ಏ. 16: ಕರ್ನಾಟಕ ಅರಣ್ಯ ಇಲಾಖೆ ಕೊಡಗು ವನ್ಯಜೀವಿ ವಿಭಾಗವು ತಲಕಾವೇರಿ ವನ್ಯಧಾಮದ ಭಾಗಮಂಡಲ ಕರಿಕೆ ಅಂತರರಾಜ್ಯ ಹೆದ್ದಾರಿ ಬದಿಯಲ್ಲಿ ಪ್ಲಾಸ್ಟಿಕ್ ನಿಷೇಧಿತ ಪ್ರದೇಶ ಎಂಬ ನಾಮ ಫಲಕ ಅಳವಡಿಸಿದೆ. ಆದರೆ ಪ್ಲಾಸ್ಟಿಕ್ ನಿಷೇಧಿಸಿ ಎಂದು ಸೂಚನೆ ಅಳವಡಿಸಿರುವ ಅರಣ್ಯ ಇಲಾಖೆಯು ತನ್ನ ಜವಾಬ್ದಾರಿ ಮರೆತು ನಾಮಫಲಕದ ಕಂಬದ ಬುಡದಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಾಕಿದ್ದು, ಇದು ಇಲಾಖೆಯ ಕಾರ್ಯವೈಖರಿಗೆ ಸಾಕ್ಷಿಯಾದಂತಿದೆ.
- ಹೊದ್ದೆಟ್ಟಿ ಸುಧೀರ್