ಕೂಡಿಗೆ, ಏ 16: ಮೈಸೂರಿನಲ್ಲಿ ವಾಸವಿದ್ದ ಕೂಡಿಗೆ ನಿವಾಸಿ ರಾಗಿಣಿ ಎಂಬವರ ಪುತ್ರ ದಿನೇಶ್ (28) ಬೈಕ್‍ನಲ್ಲಿ ಬರುವಾಗ ಮೈಸೂರು - ಸರಗೂರು ಸಮೀಪದ ತಿರುವಿನಲ್ಲಿ ಅವಘಡಕ್ಕೀಡಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೃತನು ತನ್ನ ಸ್ನೇಹಿತರ ಮನೆಯಲ್ಲಿ ಮಗುವಿನ ನಾಮಕರಣ ಸಂಭ್ರಮ ಮುಗಿಸಿ ಬರುವಾಗ ಘಟನೆ ನಡೆದಿದೆ. ಕೂಡಿಗೆಯಲ್ಲಿ ಅಂತ್ಯಕ್ರಿಯೆ ನೆರವೇರಿತು.