ವೀರಾಜಪೇಟೆ, ಏ. 16: ಕಾಶ್ಮೀರದ ಕಥ್ವಾ ಎಂಬಲ್ಲಿ ಎಂಟು ವರ್ಷದ ಬಾಲಕಿ ಆಸಿಫಾ ಎಂಬವಳ ಮೇಲೆ ದುಷ್ಕರ್ಮಿಗಳು ನಡೆಸಿದ ಅಮಾನವೀಯ ಬಲಾತ್ಕಾರ ಹಾಗೂ ಹತ್ಯೆಯನ್ನು ಖಂಡಿಸಿ ವಿರಾಜಪೇಟೆಯ ಯೂಥ್ಫ್ರೆಂಡ್ಸ್ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸ್ಥಳೀಯ ಗಡಿಯಾರ ಕಂಬದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಸಿ.ಪಿ.ಐ, ದಲಿತ ಸಂಘಟನೆಗಳು, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಎಸ್.ಡಿ.ಪಿ.ಐ.ನ ರಫ್ಷೀರ್, ಸಿ.ಪಿ.ಐ. ಜಿಲ್ಲಾ ಕಾರ್ಯ ದರ್ಶಿ ಕೆ.ವಿ.ಸುನಿಲ್, ಕಾಂಗ್ರೆಸ್ನ ಆರ್.ಕೆ. ಅಬ್ದುಸ್ಸಲಾಂ, ಎಜಾಸ್ ಅಹಮದ್, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಕೆ.ಟಿ.ಬಷೀರ್, ಮುಸ್ಲಿಮ್ ಹಿತರಕ್ಷಣಾ ವೇದಿಕೆಯ ಹನೀಫ್, ಮುಹಮ್ಮದ್ ರಾಫಿ ಮೊದ ಲಾದವರು ನಾಯಕತ್ವ ನೀಡಿದರು.