ಮಡಿಕೇರಿ, ಏ. 16 : ಕೊಡಗು ಆದಿ ದ್ರಾವಿಡ ಸಂಘದಿಂದ ಮೇ. 27, 28 ರಂದು ಕ್ರೀಡಾಕೂಟವನ್ನು ಸುಂಟಿಕೊಪ್ಪದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜನಾರ್ಧನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆದಿ ದ್ರಾವಿಡ ಜನಾಂಗದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮೇ 27 ಮತ್ತು 28 ರಂದು ಸುಂಟಿಕೊಪ್ಪದ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಪ್ರಮುಖವಾಗಿ ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಓಟದ ಸ್ಪರ್ಧೆ, ಕಬಡ್ಡಿ, ಮಹಿಳೆÉಯರಿಗೆ ಹಗ್ಗಜಗ್ಗಾಟ, ಓಟದ ಸ್ಪರ್ಧೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆಯೆಂದು ಮಾಹಿತಿ ನೀಡಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ. ಕುಶಾಲಪ್ಪ ಮಾತನಾಡಿ, ಆದಿ ದ್ರಾವಿಡ ಸಮಾಜ ಸೇವಾ ಸಂಘ ಜಿಲ್ಲೆಯಲ್ಲಿ ನೆಲೆಸಿರುವ ಸಮಾಜ ಬಾಂಧವರಿಗೆ ಅಗತ್ಯ ನಿವೇಶನಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದರೂ ಸೂಕ್ತ ಸ್ಪಂದನ ದೊರಕಿಲ್ಲ ಎಂದು ಆರೋಪಿಸಿದರು. ಸಮಾಜ ಬಾಂಧವರಿಗೆ ಅಗತ್ಯ ಸೌಲಭ್ಯಗಳಿಗೆ ಹೋರಾಟಗಳನ್ನು ನಡೆಸುವ ಹಂತದಲ್ಲೆ ಕೆಲ ಮುಖಂಡರೆನಿಸಿಕೊಂಡವರು ಸಮಾಜವನ್ನು ಒಡೆದು ಆಳುವ ಪ್ರಯತ್ನಕ್ಕೆ ಮುಂದಾಗುತ್ತಿರುವದಾಗಿ ಬೇಸರ ವ್ಯಕ್ತÀಪಡಿಸಿದರು.

ಸಂಘದಿಂದ ಐಗೂರು ಗ್ರಾಪಂ ವ್ಯಾಪ್ತಿಯ ಕಿಬ್ಲಿ ಪೈಸಾರಿಗೆ ಸಾಕಷ್ಟು ಪ್ರಯತ್ನಗಳ ಮೂಲಕ ಸಂಘ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆ. ಇದೇ ಪೈಸಾರಿಗೆ ಕುಂಬೂರಿನಿಂದ ನೀರಿನ ವ್ಯವಸ್ಥೆಗೆ ಮುಂದಾದ ಸಂದರ್ಭ ಮಾದಾಪುರ ಗ್ರಾಪಂ ಸದಸ್ಯ ಆದಿ ದ್ರಾವಿಡ ಸಮಾಜದ ಸೋಮಪ್ಪ ತಡೆಯೊಡ್ಡಿದ್ದು, ಈ ಧೋರಣೆಯನ್ನು ಖಂಡಿಸುವದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಹೆಚ್. ಆರ್. ಶಿವಪ್ಪ, ಉಪಾಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.