ಮಡಿಕೇರಿ, ಏ. 17: ಮಡಿಕೇರಿಯ ಓ.ಡಿ.ಪಿ. ಸಂಸ್ಥೆ ಹಾಗೂ ಬೆಂಗಳೂರಿನ ನಬಾರ್ಡ್ ಫೈನಾನ್ಷಿಯಲ್ ಸರ್ವೀಸಸ್ ಸಂಸ್ಥೆಯಿಂದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಆರ್ಥಿಕ ಸಾಕ್ಷರತೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಂಗಾರ ಗುಪ್ತಾಜಿ ಅವರು ಪ್ರತಿಯೊಬ್ಬರು ಹಣಕಾಸು ವ್ಯವಹಾರ ನಡೆಸುವ ಬಗ್ಗೆ ಅರಿತುಕೊಳ್ಳಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ನಬಾರ್ಡ್ ಜಿಲ್ಲಾ ಅಭಿವೃದ್ಧಿ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಅವರು ಪ್ರತಿಯೊಬ್ಬರು ಬ್ಯಾಂಕಿನ ಮೂಲಕ ಆರ್ಥಿಕ ನಿರ್ವಹಣೆ ಮಾಡಿ ಸ್ವಾವಲಂಬಿ ಬದುಕು ಸಾಗಿಸಬೇಕೆಂದರು. ವಿವಿಧ ಯೋಜನೆಗಳ ಕುರಿತಾಗಿ ಅವರು ಸಮಗ್ರ ಮಾಹಿತಿ ನೀಡಿದರು. ಓ.ಡಿ.ಪಿ. ಸಂಸ್ಥೆಯ ಜಾಯ್ಸ್ ಮೆನೆಜಸ್ ಸ್ವಾಗತಿಸಿ, ನಿರೂಪಿಸಿದರು. ಲೀನಾ ಲೋಬೋ ವಂದಿಸಿದರು.