ನಾಪೆÇೀಕ್ಲು, ಏ. 17: ತಾ. 15ರಂದು ಮಧ್ಯಾಹ್ನ ನಾಪೆÇೀಕ್ಲು ಹಳೇ ತಾಲೂಕು ಬಳಿ ಉಂಟಾದ ಶಾರ್ಟ್ ಸಕ್ರ್ಯೂಟ್‍ನಿಂದ ಒಂದು ಮನೆಯೊಳಗಿನ ಫ್ರಿಡ್ಜ್, ವಾಶಿಂಗ್ ಮಿಷಿನ್, ಟಿ.ವಿ, ಫ್ಯಾನ್, ಸೋಫಾ ಸೆಟ್‍ಗಳು, ಶೋಕೇಸ್ ಸೇರಿದಂತೆ ಮನೆಯೊಳಗಿನ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಅದರೊಂದಿಗೆ ಇತರ ಎರಡು ಮನೆಗಳ ಉಪಕರಣಗಳು ಹಾನಿಯಾದ ಬಗ್ಗೆ ವರದಿಯಾಗಿದೆ.ಈ ಮನೆ ಮಂದಿ ಕುಲ್ಲೇಟಿರ ಹಾಕಿ ನಮ್ಮೆಯ ಉದ್ಘಾಟನಾ ಸಮಾರಂಭಕ್ಕೆ ತೆರಳಿದ ಕಾರಣ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ. ಹಳೇ ತಾಲೂಕಿನ ಅರೆಯಡ ಸದಾ ಅವರ ಮನೆಯಲ್ಲಿ ಮಧ್ಯಾಹ್ನ ಸುಮಾರು 12 ಗಂಟೆ ಸಮಯಕ್ಕೆ ಬೆಂಕಿ ಹತ್ತಿಕೊಂಡ ಬಗ್ಗೆ ತಿಳಿದು ಬಂದಿದೆ. ಬೆಂಕಿಯ ತೀವ್ರತೆಗೆ ಎಲೆಕ್ಟ್ರಿಕ್ ಸ್ವಿಚ್ ಬೋರ್ಡ್‍ಗಳು, ಶೋಕೇಸ್, ಕಿಟಕಿ, ಗಾಜುಗಳು ಪುಡಿಯಾಗಿವೆ. ಇಡೀ ಮನೆಯ ಗೋಡೆಗಳು, ಚಾವಣಿ, ನೆಲ, ಹಾಸಿಗೆ, ಬಟ್ಟೆಬರೆ ಸೇರಿದಂತೆ ಎಲ್ಲಾ ವಸ್ತುಗಳಲ್ಲಿ ಮಸಿ ಆವರಿಸಿಕೊಂಡಿದೆ.

ಇದರೊಂದಿಗೆ ಎನ್.ಎಸ್.ಉದಯ ಶಂಕರ್ ಮತ್ತು ಶಿವಚಾಳಿಯಂಡ ವಿಜು ಪೂಣಚ್ಚ ಅವರ ಮನೆ ಯಲ್ಲಿಯೂ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ತಾ. 16ರಂದು ಕೂಡ ಮತ್ತೆ ಶಾರ್ಟ್ ಸಕ್ರ್ಯೂಟ್ ಉಂಟಾದ ಕಾರಣ ಇಡೀ ಅರೆಯಡ ಕುಟುಂಬಸ್ಥರ ಮನೆಗಳು, ಕೊಂಬಂಡ ಅನು, ಲೋಕನಾಥ್, ನಕುಲ, ಪ್ರಕಾಶ್, ಅಶೋಕ್, ರವೀಂದ್ರ ಅವರ ಮನೆ ಸೇರಿದಂತೆ ಭಗವತಿ ಟ್ರಾನ್ಸ್‍ಫಾರ್ಮರ್ ನಿಂದ ಸಂಪರ್ಕ ಹೊಂದಿರುವ ಎಲ್ಲಾ ಮನೆಗಳ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿರುವದಾಗಿ ತಿಳಿದು ಬಂದಿದೆ.

ಚೆಸ್ಕಾಂ ವಿರುದ್ಧ ಆಕ್ರೋಶ: ಈ ಅನಾಹುತಕ್ಕೆ ಚೆಸ್ಕಾಂ ಇಲಾಖೆಯ ನೌಕರರ ಬೇಜವಾಬ್ದಾರಿತನವೇ ಕಾರಣ. ಈ ಬಗ್ಗೆ ಕಚೇರಿಗೆ ದೂರು ನೀಡಿದರೂ ಸ್ಥಳಕ್ಕೆ ಯಾವದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಮೇಲಧಿಕಾರಿಗಳಿಗೆ ಈ ಕಚೇರಿಯ ಪ್ರಭಾರ ಅಧಿಕಾರಿ ವಿಮಲ ದೂರವಾಣಿ ಮೂಲಕ ತಿಳಿಸಿದರೂ ಎಲೆಕ್ಷನ್ ಡ್ಯೂಟಿ ನೆಪ ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಚೆಸ್ಕಾಂ ಇಲಾಖೆಗೆ ಲಿಖಿತ ದೂರು ನೀಡಿ ಮಾತನಾಡಿದ ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದು. ಚೆಸ್ಕಾಂ ಇಲಾಖೆಯ ಬೇಜವಾಬ್ದಾರಿ ತನದಿಂದ ನಷ್ಟ ಸಂಭವಿಸಿದ್ದು, ಈ ಬಗ್ಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಲಾಗುವದು ಎಂದು ತಿಳಿಸಿದರು.