ಮಡಿಕೇರಿ, ಏ. 17: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯಿತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ 13 ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯದಲ್ಲಿ ಪೊನ್ನಚ್ಚನ 4 ವಿಕೆಟ್‍ಗೆ 67 ರನ್ ಗಳಿಸಿತು. ಎದುರಾಳಿ ಅಮೆಮನೆ ತಂಡ 5 ವಿಕೆಟ್‍ಗೆ 35 ರನ್ ಗಳಿಸಿ ಸೋಲು ಕಂಡಿತು. ಕೆದಂಬಾಡಿ (ಎ) 8 ವಿಕೆಟ್‍ಗೆ 79 ರನ್ ಬಾರಿಸಿತು. ಬೊಳ್ಳೂರು ತಂಡ 44 ರನ್‍ಗೆ ಆಲೌಟ್ ಆಯಿತು. ಮರದಾಳು ತಂಡ 3 ವಿಕೆಟ್‍ಗೆ 75 ರನ್ ಗಳಿಸಿದರೆ, ಪೂಜಾರಿರ ತಂಡ 9 ವಿಕೆಟ್‍ಗೆ 59 ರನ್ ಬಾರಿಸಿ ಸೋಲು ಕಂಡಿತು. ಕುಲ್ಲಚೆಟ್ಟಿ ತಂಡ 8 ವಿಕೆಟ್‍ಗೆ 35 ರನ್ ಬಾರಿಸಿತು. ಕೋಳುಮುಡಿಯನ ತಂಡ 2 ವಿಕೆಟ್‍ಗೆ 36 ರನ್ ಗಳಿಸಿ ಜಯ ಸಾಧಿಸಿತು. ಇಟ್ಟಣಿಕೆ 5 ವಿಕೆಟ್‍ಗೆ 40 ರನ್ ಬಾರಿಸಿದರೆ, ಅಣ್ಣಮಂಡ 5 ವಿಕೆಟ್‍ಗೆ 43 ರನ್ ಗಳಿಸಿ ಜಯ ಸಾದಿಸಿತು. ದಂಬೆಕೋಡಿ 7 ವಿಕೆಟ್‍ಗೆ 54 ರನ್ ಗಳಿಸಿದರೆ, ಮತ್ತೂರು 2 ವಿಕೆಟ್‍ಗೆ 56 ರನ್ ಬಾರಿಸಿ ಗೆಲವು ಸಾಧಿಸಿತು. ಕೆದಂಬಾಡಿ (ಎ) 8 ವಿಕೆಟ್‍ಗೆ 57 ರನ್ ಗಳಿಸಿದರೆ, ಕೋಳುಮುಡಿಯನ 5 ವಿಕೆಟ್‍ಗೆ 49 ರನ್ ಗಳಿಸಿ ಸೋಲು ಕಂಡಿತು. ಹುಲಿಮನೆ 3 ವಿಕೆಟ್‍ಗೆ 59 ರನ್ ಗಳಿಸಿದರೆ, ಪಡ್ಡಂಬೈಲು 5 ವಿಕೆಟ್‍ಗೆ 37 ರನ್ ಗಳಿಸಿ ಸೋಲನುಭವಿಸಿದರು.

ಉಗ್ರಾಣಿ ತಂಡ 10 ವಿಕೆಟ್‍ಗೆ 82 ರನ್ ಬಾರಿಸಿದರೆ, ಅಣ್ಣಮಂಡ 8 ವಿಕೆಟ್‍ಗೆ 72 ರನ್ ಗಳಿಸಿ ಸೋಲು ಕಂಡಿತು. ಕಲ್ಲೆಂಬಿ 2 ವಿಕೆಟ್‍ಗೆ 38 ರನ್ ಗಳಿಸಿದರೆ, ಪೊನ್ನಚ್ಚನ 1 ವಿಕೆಟ್‍ಗೆ 39 ರನ್ ಬಾರಿಸಿ ಜಯಗಳಿಸಿತು. ಕುಡೆಕಲ್ಲು (ಬಿ) 5 ವಿಕೆಟ್‍ಗೆ 55 ರನ್ ಗಳಿಸಿದರೆ, ಮರದಾಳು 5 ವಿಕೆಟ್‍ಗೆ 51 ರನ್ ಗಳಿಸಿ ಸೋಲು ಕಂಡಿತು. ಕೆದಂಬಾಡಿ (ಎ) 8 ವಿಕೆಟ್‍ಗೆ 33 ರನ್ ಗಳಿಸಿದರೆ, ಕುದುಪಜೆ 2 ವಿಕೆಟ್‍ಗೆ 34 ರನ್ ಗಳಿಸಿ ಜಯಗಳಿಸಿತು. ಹುಲಿಮನೆ 7 ವಿಕೆಟ್‍ಗೆ 55 ರನ್ ಗಳಿಸಿದರೆ, ಮಿತ್ತೂರು 21 ರನ್‍ಗೆ ಆಲೌಟ್ ಆಯಿತು.