ಮಡಿಕೇರಿ, ಏ. 17: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಶಪಡಿಸಿ ಕೊಂಡಿದ್ದ ಸ್ವತ್ತುಗಳ ಸಾರ್ವಜನಿಕ ಬಹಿರಂಗ ಹರಾಜು ಪ್ರಕ್ರಿಯೆಯನ್ನು ತಾ. 19 ರಂದು ಮೂರ್ನಾಡು ಉಪ ಠಾಣಾ ಆವರಣದಲ್ಲಿ ಏರ್ಪಡಿಸ ಲಾಗಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಆ ದಿನ ಬೆಳಿಗ್ಗೆ 10 ಗಂಟೆಗೆ ಮೂರ್ನಾಡು ಉಪಠಾಣಾ ಆವರಣದಲ್ಲಿ ಹಾಜರಿರು ವಂತೆ ಇಲಾಖಾ ಪ್ರಕಟಣೆ ಕೋರಿದೆ.
ಹರಾಜು ಮಾಡುವ ಸ್ವತ್ತುಗಳು
15 ದೊಡ್ಡ ತೆಪ್ಪಗಳು, 2 ಚಿಕ್ಕ ತೆಪ್ಪೆಗಳು ಹಾಗೂ ಕೆಎ 02-2178ರ ಮಾರುತಿ ಓಮಿನಿ ವ್ಯಾನ್ ಅನ್ನು ಹರಾಜು ಮಾಡಲಾಗುತ್ತಿದೆ.
ಹರಾಜು ಪ್ರಕ್ರಿಯೆಯು ಇಲಾಖಾ ನಿಬಂಧನೆ ಮತ್ತು ಷರತ್ತುಗಳಿಗೆ ಅನುಸಾರವಾಗಿ ಜರುಗಲಿದ್ದು, ಹರಾಜಿನಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ದೂ. 08272-228777ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.