ಮಡಿಕೇರಿ, ಏ. 17: ಜಮ್ಮುವಿನ ಕಥುವಾ ಎಂಬಲ್ಲಿ ಎಂಟರ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಘಟನೆಯನ್ನು ಹಾಗೂ ಉತ್ತರಪ್ರದೇಶದ ಉನ್ನಾವೋ ಎಂಬಲ್ಲಿನ ಅತ್ಯಾಚಾರ ಘಟನೆಯನ್ನು ಕೊಡಗು ಮುಸ್ಲಿಂ ಸಮಾಜ ತೀವ್ರವಾಗಿ ಖಂಡಿಸಿದೆ. ಉತ್ತರಪ್ರದೇಶದ ಶಾಸಕನೇ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರುವ ಮೂಲಕ ದೇಶಪ್ರೇಮಿಗಳ ನಿಜಬಣ್ಣವನ್ನು ಜಗತ್ತಿನ ಮುಂದೆ ಬಹಿರಂಗಗೊಳಿಸಿದ್ದಾರೆ. ಈ ಎರಡೂ ಘಟನೆಗಳ ಆರೋಪಿಗಳ ಮೇಲೆ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಕೊಡಗು ಮುಸ್ಲಿಂ ಸಮಾಜದ ಅಧ್ಯಕ್ಷ ಇಬ್ರಾಹಿಂ ಮಾಸ್ಟರ್, ಕಾರ್ಯಾಧ್ಯಕ್ಷ ಖಾಸಿಂ ಹಾಗೂ ಕಾರ್ಯದರ್ಶಿ ಅಮೀನ್ ಮೊಹಿಸಿನ್ ಆಗ್ರಹಿಸಿದ್ದಾರೆ.