ಮಡಿಕೇರಿ, ಏ. 17: ಅಮ್ಮ-ಮಗುವಿನಂತಿರುವ ತುಳುವರು ಮತ್ತು ದೈವಗಳ ನಡುವಿನ ಸಂಬಂಧವನ್ನು ಹಣದಿಂದ ಅಳೆಯುವದನ್ನು ಬಿಟ್ಟರೆ ಮಾತ್ರ ತುಳುನಾಡಿನ ಅಂತ:ಸತ್ವ ಉಳಿಯಲು ಸಾಧ್ಯ ಎಂದು ಮಂಗಳೂರಿನ ಖ್ಯಾತ ವಾಗ್ಮಿ ದಯಾನಂದ ಕತ್ತಲ್ಸರ್ ಅಭಿಪ್ರಾಯಿಸಿದರು. ಕೊಡಗು ಜಿಲ್ಲಾ ತುಳುವೆರೆ ಜನಪದ ಕೂಟವು, ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಆಯೋಜಿಸಿದ್ದ ‘ಬಿಸು ಪರ್ಬ ಸಂತೋಷ ಕೂಟ’ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಮಡಿಕೇರಿ, ಏ. 17: ಅಮ್ಮ-ಮಗುವಿನಂತಿರುವ ತುಳುವರು ಮತ್ತು ದೈವಗಳ ನಡುವಿನ ಸಂಬಂಧವನ್ನು ಹಣದಿಂದ ಅಳೆಯುವದನ್ನು ಬಿಟ್ಟರೆ ಮಾತ್ರ ತುಳುನಾಡಿನ ಅಂತ:ಸತ್ವ ಉಳಿಯಲು ಸಾಧ್ಯ ಎಂದು ಮಂಗಳೂರಿನ ಖ್ಯಾತ ವಾಗ್ಮಿ ದಯಾನಂದ ಕತ್ತಲ್ಸರ್ ಅಭಿಪ್ರಾಯಿಸಿದರು. ಕೊಡಗು ಜಿಲ್ಲಾ ತುಳುವೆರೆ ಜನಪದ ಕೂಟವು, ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಆಯೋಜಿಸಿದ್ದ ‘ಬಿಸು ಪರ್ಬ ಸಂತೋಷ ಕೂಟ’ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ನಡೆದವು. ಕೆಲವೆಡೆ ಆರಾಧನಾಲಯ ಗಳಲ್ಲೂ ಮೃತದೇಹಗಳು ತೇಲಿ ಬಂದವು. ಆದರೆ, ದೈವಾರಾಧನೆ ಯಿರುವಲ್ಲಿ ಯಾವದೇ ಪ್ರಕೃತಿ ವಿಕೋಪ ಸಂಭವಿಸದು ಎಂಬದಕ್ಕೆ ತುಳುನಾಡೇ ಜೀವಂತ ಸಾಕ್ಷಿ ಎಂದು ಹೇಳಿದ ಅವರು, ಭೂದೇವಿಯು ಫಲವತಿಯಾಗುವ ಕಾಲ ಬಿಸು ಹಬ್ಬ ಎಂದು ವಿಶ್ಲೇಷಿಸಿದರು. ಫಲ ಕೊಡುವ ಭೂದೇವಿಗೆ ಕೃತಜ್ಞತೆ ಸಲ್ಲಿಸುವ ತುಳುನಾಡಿನ ಹಬ್ಬವೇ ಬಿಸು ಎಂದು ಅವರು ಹೇಳಿದರು.
ಇಂಗ್ಲೀಷ್ ಕಲಿಕೆ ವ್ಯಾವಹಾರಿಕವಾಗಿ ಅಗತ್ಯವಾದರೂ, ಭಾಷೆಯ ವ್ಯಾಮೋಹ ಬೆಳೆಸಿಕೊಳ್ಳುವದು ಸರಿಯಲ್ಲ. ನಮ್ಮ ಸಂಸ್ಕøತಿ, ಪರಂಪರೆಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿ, ಬೆಳೆಸಬೇಕಾದ ಅಗತ್ಯವಿದೆ. ಒಂದು ವೇಳೆ ಪಾಶ್ಚಿಮಾತ್ಯ ಅನುಕರಣೆ ಇದೇ ರೀತಿ ಮುಂದುವರೆದರೆ ಮುಂದಿನ 50 ವರ್ಷಗಳಲ್ಲಿ ಮೂಳೆ, ಮಾಂಸದ ವ್ಯಕ್ತಿಗಳನ್ನುಳಿದು ಎಲ್ಲವೂ ಪಾಶ್ಚಿಮಾತ್ಯವಾಗುವ ಅಪಾಯವಿದೆ ಎಂದು ಅವರು ಸೂಚ್ಯವಾಗಿ ಹೇಳಿದರು. ತುಳುಭಾಷೆ 8ನೇ ಪರಿಚ್ಚೇದಕ್ಕೆ ಸೇರುವಂತಾಗಲು ಎಲ್ಲರೂ ಮನೆಗಳಲ್ಲಿ ತುಳು ಭಾಷೆಯನ್ನೇ ಮಾತನಾಡಿ ಎಂದು ದಯಾನಂದ ಕತ್ತಲ್ಸರ್ ಕರೆ ಕೊಟ್ಟರು.
ಸಹಕಾರ ಬ್ಯಾಂಕ್ : ಸಮಾರಂಭವನ್ನು ಉದ್ಘಾಟಿಸಿದ ತುಳು ಜನಪದ ಕೂಟದ ಸ್ಥಾಪಕಾಧ್ಯಕ್ಷ ಕೀಲ್ಪಾಡಿ ಶೇಖರ್ ಭಂಡಾರಿ
(ಮೊದಲ ಪುಟದಿಂದ) ಮಾತನಾಡಿ, ಕೊಡಗಿನ ಎಲ್ಲಾ ತುಳುವರು ಒಟ್ಟಾಗಿರುವ ಈ ದಿನ ಐತಿಹಾಸಿಕ ಎಂದು ಬಣ್ಣಿಸಿದರು. ವಿಶ್ವಮಾನ್ಯವಾಗಿರುವ ತುಳು ಸಂಸ್ಕøತಿ ಮಾಸದಂತೆ ಎತ್ತಿ ಹಿಡಿವ ಕೆಲಸವನ್ನು ಎಲ್ಲರೂ ಮಾಡಬೇಕೆಂದು ಕರೆ ನೀಡಿದ ಅವರು, ಜಾತ್ಯತೀತ ಮತ್ತು ಪಕ್ಷಾತೀತ ನೆಲೆÉಗಟ್ಟಿನ ತುಳು ಜನಪದ ಕೂಟದ ವತಿಯಿಂದ ಸಹಕಾರ ಬ್ಯಾಂಕ್ ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಚಿತ್ರನಟ ಸುನಿಲ್, ತುಳು ಜನಪದ ಕೂಟದ ಪದಾಧಿಕಾರಿಗಳಾದ ಬಾಲಕೃಷ್ಣ ರೈ, ಬಿ.ಬಿ. ಐತಪ್ಪ ರೈ, ಪಿ.ಎಂ. ರವಿ, ಬಿ.ವೈ. ಆನಂದ ರಘು, ಪ್ರಭು ರೈ, ಎಂ.ಡಿ. ನಾಣಯ್ಯ, ಬಿ.ಡಿ ನಾರಾಯಣ ರೈ, ಹರೀಶ್ ಆಳ್ವ, ದಿನೇಶ್ ಕುಲಾಲ್, ದಾಮೋದರ್ ಆಚಾರ್ಯ, ವಿಜಯಲಕ್ಷ್ಮಿ ರವಿ ಶೆಟ್ಟಿ, ಶ್ರೀಧರ್ ನೆಲ್ಲಿತ್ತಾಯ, ಉದ್ಯಮಿ ಜಯಂತಿ ಆರ್ ಶೆಟ್ಟಿ ಮತ್ತಿತರರು ಹಾಜರಿದ್ದರು.
ಪುರುಷೋತ್ತಮ ಪ್ರಾರ್ಥಿಸಿ, ಮೊಗೇರ ರವಿ ಸ್ವಾಗತಿಸಿದರು. ಕಡಗದಾಳು ಜಯಪ್ಪ ಹಾಗೂ ಸತೀಶ್ ಕುಂದರ್ ಕಾರ್ಯಕ್ರಮ ನಿರೂಪಿಸಿ, ಜಯಪ್ಪ ವಂದಿಸಿದರು.