ಸೋಮವಾರಪೇಟೆ, ಏ. 17: ಜೆಡಿಎಸ್‍ನ ಕಾನೂನು ವಿಭಾಗದ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ವಕೀಲ ದೊಡ್ಡಮಳ್ತೆ ಗ್ರಾಮದ ಡಿ.ಎಂ. ಪೂವಯ್ಯ ಆಯ್ಕೆಯಾಗಿದ್ದಾರೆ. ಪಕ್ಷದ ಕಾನೂನು ವಿಭಾಗದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್ ಈ ಆಯ್ಕೆ ಮಾಡಿದ್ದಾರೆ.
ಆಯ್ಕೆ: ಕುಶಾಲನಗರ ಹೋಬಳಿಯ ಸಂಘಟನಾ ಕಾರ್ಯದರ್ಶಿಯಾಗಿ ಹೆಬ್ಬಾಲೆ ಗ್ರಾಮದ ಎಚ್.ಸಿ. ನಾಗೇಶ್, ಮಹಿಳಾ ಘಟಕದ ಅಧ್ಯಕ್ಷರಾಗಿ ಲಲಿತಾ ಚಂದ್ರಪ್ಪ, ಉಪಾಧ್ಯಕ್ಷರುಗಳಾಗಿ ಜಲಾ ದಿನೇಶ್, ಶೋಭಮಣಿ, ಶನಿವಾರಸಂತೆ ಹೋಬಳಿ ಅಧ್ಯಕ್ಷರಾಗಿ ಕುಸುಮಾ ಸುಧಾಕರ್, ಉಪಾಧ್ಯಕ್ಷರಾಗಿ ಮಮ್ತಾಜ್, ಶಾಂತಳ್ಳಿ ಹೋಬಳಿ ಅಧ್ಯಕ್ಷರಾಗಿ ಭಾರತಿ ಸುರೇಶ್, ಉಪಾಧ್ಯಕ್ಷರಾಗಿ ವಿಶಾಲಾಕ್ಷಿ ಅನಿಲ್, ಕೂಡಿಗೆ ಹೋಬಳಿ ಅಧ್ಯಕ್ಷರಾಗಿ ಪ್ರೇಮಲೀಲಾ, ಉಪಾಧ್ಯಕ್ಷರಾಗಿ ಪ್ರೀತಿ ಅರುಣ್ ಆಯ್ಕೆಯಾಗಿದ್ದಾರೆ.