ಮಡಿಕೇರಿ, ಏ. 17: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಂದು ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲವೆಂದು ಮಡಿಕೇರಿ ವಿಧಾನಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶಾರದಾಂಭ ಹಾಗೂ ವೀರಾಜಪೇಟೆ ಕ್ಷೇತ್ರದ ಅಧಿಕಾರಿ ಗೋವಿಂದರಾಜು ಖಚಿತಪಡಿಸಿದ್ದಾರೆ.

ಬದಲಾಗಿ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳ ಕಡೆಯವರು ಇಂದಿನಿಂದ ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿರುವ ಕುರಿತು ಮಾಹಿತಿ ಪಡೆದುಕೊಂಡಿದ್ದಾಗಿ ವಿವರಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ನಿಯಮಗಳ ಮಾಹಿತಿ ಪಡೆದುಕೊಂಡಿದ್ದು, ಪ್ರಥಮ ದಿನದ ನಾಮಪತ್ರ ಸಲ್ಲಿಕೆ ಶೂನ್ಯವೆಂದು ಮಾಹಿತಿ ನೀಡಿದ್ದಾರೆ.

ಇಂದಿನಿಂದ ತಾ. 24ರ ತನಕ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಬಳಿಕ ಮರು ಪರಿಶೀಲನೆ, ಹಿಂಪಡೆಯುವ ಪ್ರಕ್ರಿಯೆಗಳು ತಾ. 27ರ ತನಕ ಮುಂದುವರಿಯುವದರೊಂದಿಗೆ ಈ ಸಂಬಂಧ ಪಂಚಾಯಿತಿ ಹಂತದಲ್ಲೂ ಮಾಹಿತಿ ಪ್ರಚುರಪಡಿಸಲಾಗಿದೆ ಎಂದು ವಿವರಿಸಿದ್ದಾರೆ.