ಮಡಿಕೇರಿ, ಏ. 17: ರಾಜ್ಯಮಟ್ಟದ ಸಾಹಿತ್ಯಾತ್ಮಕ ಹಾಗೂ ಸಾಂಸ್ಕøತಿಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ಸಂಸ್ಥೆಯ 33ನೇ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ರಾಷ್ಟ್ರಕವಿ ಕುವೆಂಪು ಅವರ 114ನೇ ಜನ್ಮದಿನದ ಅಂಗವಾಗಿ ರಾಜ್ಯಮಟ್ಟದ ಕವನಗಳ ಸ್ಪರ್ಧೆಯನ್ನು ಏರ್ಪಡಿಸಿದೆ.

ಕವನ ಸ್ಪರ್ಧೆಯಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ಐದು ಮಂದಿ ಹೊರನಾಡ ಕನ್ನಡಿಗರಿಗೆ, ಹತ್ತು ಮಂದಿ ರಾಜ್ಯದ ಕವಿಗಳು ಹಾಗೂ ಕವಯತ್ರಿಯರಿಗೆ ಮತ್ತು ಇಬ್ಬರು ವಿಶೇಷಚೇತನ (ವಿಕಲಾಂಗ) ಕವಿಗಳಿಗೆ ಸಂಸ್ಥೆಯು ಮೈಸೂರು ನಗರದಲ್ಲಿ ನಡೆಸಲಿರುವ ರಾಷ್ಟ್ರಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ರಾಜ್ಯಮಟ್ಟದ ರಾಷ್ಟ್ರಕವಿ ಕುವೆಂಪು ಕಾವ್ಯ ಪುರಸ್ಕಾರ ನೀಡಿ ಸನ್ಮಾನಿಸಲಾಗುವದು. ಕವನ ಸಂಕಲನಕ್ಕೆ ಆಯ್ಕೆಯಾದ ಕವನಗಳನ್ನು ರಾಷ್ಟ್ರಕವಿ ಕುವೆಂಪು 114 ರಾಜ್ಯಮಟ್ಟದ ಕವನ ಸಂಕಲನದಲ್ಲಿ ಪ್ರಕಟಿಸಲಾಗುವದು.

ಆಸಕ್ತಿಯುಳ್ಳ ಕವಿಗಳು, ಕವಯತ್ರಿಯರು ತಮ್ಮ ಎರಡು ಸ್ವರಚಿತ ಕವನಗಳನ್ನು ಸ್ವ-ವಿಳಾಸವುಳ್ಳ ಪತ್ರದೊಂದಿಗೆ ಭೇರ್ಯ ರಾಮಕುಮಾರ್, ಅಧ್ಯಕ್ಷರು, ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಅರ್ಕೇಶ್ವರನಗರ ಬಡಾವಣೆ, ಕೆ.ಆರ್. ನಗರ ಟೌನ್, ಮೈಸೂರು ಜಿಲ್ಲೆ. ಪಿನ್- 571602 ಈ ವಿಳಾಸಕ್ಕೆ ಜೂನ್ 30 ರೊಳಗೆ ತಲಪುವಂತೆ ಕಳುಹಿಸಬೇಕೆಂದು ಪ್ರಕಟಣೆ ತಿಳಿಸಿದೆ.