ಮಡಿಕೇರಿ, ಏ. 17: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ದರ್ಜೆ 3 ರ ಕಿರಿಯ ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಪಿ.ಯು.ಸಿ.ಯಲ್ಲಿ ಆಟ್ರ್ಸ್, ಸೈನ್ಸ್ ಅಥವಾ ಕಾಮರ್ಸ್‍ನಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಬೇಸಿಕ್ಸ್, ವಿಂಡೋಸ್, ಎಂ.ಎಸ್. ಆಫೀಸ್, ಕಮ್ಯುನಿಕೇಶನ್ ಅಂಡ್ ಇಂಟರ್‍ನೆಟ್ ಮತ್ತು ಡೇಟಾ ಎಂಟ್ರಿ ಆಪರೇಶನ್‍ನಲ್ಲಿ ಸರಕಾರದ ಅಂಗೀಕೃತ ಸಂಸ್ಥೆಯೊಂದರಿಂದ 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಹೊಂದಿರಬೇಕು. ಕನ್ನಡ ನುಡಿ ಸಾಫ್ಟ್‍ವೇರ್ ತಿಳಿದಿರಬೇಕು. ವಯೋಮಿತಿ: ತಾ. 25.4.2018 ಕ್ಕೆ ಕನಿಷ್ಟ 18 ವರ್ಷ ಪೂರ್ತಿಯಾಗಿರಬೇಕು. 35 ರ ಒಳಗಿರಬೇಕು. 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷಗಳಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 40 ವರ್ಷದೊಳಗಿನವರಾಗಿರತಕ್ಕದ್ದು. ಮಾಜಿ ಸೈನಿಕ ಅಭ್ಯರ್ಥಿಗಳಾಗಿದ್ದಲ್ಲಿ ಭಾರತದ ಸಶಸ್ತ್ರ ಪಡೆಯಲ್ಲಿ ಕನಿಷ್ಟ 15 ವರ್ಷಗಳ ಸೇವೆ ಸಲ್ಲಿಸಿರಬೇಕು. (45 ವರ್ಷ ಮೀರಿರಬಾರದು) ಹೆಚ್ಚಿನ ಮಾಹಿತಿಗೆ ತಿತಿತಿ.mಥಿbಟಿಣಛಿ.ಛಿom ವೆಬ್‍ಸೈಟ್‍ನಲ್ಲಿ ತಿಳಿದುಕೊಳ್ಳಬಹುದಾಗಿದ್ದು, ಅರ್ಜಿ ಸಲ್ಲಿಸಲು ತಾ. 25 ಕೊನೆಯ ದಿನವಾಗಿರುತ್ತದೆ.

ನಿಮಾನ್ಸ್ ಆಸ್ಪತ್ರೆಯಲ್ಲಿ ನರ್ಸ್‍ಗಳು

ಬೆಂಗಳೂರಿನ ನಿಮಾನ್ಸ್ (ರಾಷ್ಟ್ರೀಯ ನರ ವಿಜ್ಞಾನ ಸಂಸ್ಥೆ) ಆಸ್ಪತ್ರೆಯಲ್ಲಿ 160 ಸ್ಟಾಫ್ ನರ್ಸ್‍ಗಳ ಹುದ್ದೆ ಖಾಲಿ ಇದ್ದು, ಅರ್ಹರಿಂದ ಅರ್ಜಿ ಕರೆಯಲಾಗಿದೆ. ವಿದ್ಯಾರ್ಹತೆ 2ನೇ ಪಿ.ಯು.ಸಿ. ಪಾಸಾಗಿರಬೇಕು. ಸ್ಟೇಟ್ ನರ್ಸಿಂಗ್ ಕೌನ್ಸಿಲ್‍ನಿಂದ ಎ ಗ್ರೇಡ್ ನರ್ಸ್ ತರಬೇತಿ ಪಡೆದಿದ್ದು, ಯಾವದೇ ರಾಜ್ಯದ ನರ್ಸಿಂಗ್ ಕೌನ್ಸಿಲ್‍ನಲ್ಲಿ ರಿಜಿಸ್ಟರ್ ಮಾಡಿರತಕ್ಕದ್ದು, ಉತ್ತಮ ಆಸ್ಪತ್ರೆಯಲ್ಲಿ ಕನಿಷ್ಟ 2 ವರ್ಷಗಳ ಅನುಭವ ಹೊಂದಿರಬೇಕು. (ಪದವಿ ಆಗದ ಅಭ್ಯರ್ಥಿಗಳು) ವಯೋಮಿತಿ 30 ವರ್ಷಗಳು. ಅಭ್ಯರ್ಥಿಗಳನ್ನು ಆನ್‍ಲೈನ್ ನೇಮಕಾತಿ ಪರೀಕ್ಷೆ ಮೂಲಕ ನೇಮಿಸಿಕೊಳ್ಳಲಾಗುವದು. ಹೆಚ್ಚಿನ ಮಾಹಿತಿಗೆ ತಿತಿತಿ.ಟಿimhಚಿಟಿs.ಚಿಛಿ.iಟಿ ನಲ್ಲಿ ತಿಳಿದುಕೊಳ್ಳಬಹುದು.