ಮಡಿಕೇರಿ, ಏ. 18: ರಾಜ್ಯಮಟ್ಟದ ಸಾಹಿತ್ಯಾತ್ಮಕ ಹಾಗೂ ಸಾಂಸ್ಕøತಿಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ಸಂಸ್ಥೆಯ 33ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ನಾಡು-ನುಡಿ-ಕಲೆ-ಸಂಸ್ಕøತಿಗಳ ಅಭ್ಯುದಯಕ್ಕಾಗಿ ದುಡಿಯುತ್ತಿರುವ ಸಾಧಕರಿಗೆ ರಾಜ್ಯಮಟ್ಟದ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ನೀಡಲು ಯೋಜಿಸಿದೆ.
ಕನ್ನಡ ನಾಡು-ನುಡಿ, ಸಾಹಿತ್ಯ, ಚಿತ್ರಕಲೆ, ರಂಗಭೂಮಿ, ಯಕ್ಷಗಾನ, ಜಾನಪದ, ಸಮಾಜಸೇವೆ, ಮಹಿಳಾ ಸೇವೆ, ಮಕ್ಕಳ ಸೇವೆ, ಅಂಗವಿಕಲರ ಸೇವೆ, ಗ್ರಾಮೀಣ ಸೇವೆ, ಸಂಗೀತ, ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಾಗೂ ಸಲ್ಲಿಸುತ್ತಿರುವ ಸಾಧಕರು ತಮ್ಮ ಎರಡು ಭಾವಚಿತ್ರಗಳೊಂದಿಗೆ ತಮ್ಮ ಸಂಪೂರ್ಣ ಸೇವೆಯ ವಿವರಗಳನ್ನು ಕಳಿಸಿಕೊಡಬಹುದಾಗಿದೆ. ಸೇವೆಗೆ ಸಂಬಂಧಿಸಿದ ಛಾಯಾಚಿತ್ರಗಳು ಹಾಗೂ ಪತ್ರಿಕಾ ವರದಿಗಳು ಮೊದಲಾದ ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಡನೆ ದಾಖಲಿಸಬೇಕು.
ಆಯ್ಕೆಯಾದ ಸಾಧಕರಿಗೆ ಸಂಸ್ಥೆಯು ಮೈಸೂರು ನಗರದಲ್ಲಿ ನಡೆಸಲಿರುವ ರಾಷ್ಟ್ರಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಗುವದು.
ತಮ್ಮ ಅರ್ಜಿಗಳನ್ನು ಭೇರ್ಯ ರಾಮಕುಮಾರ್, ಅಧ್ಯಕ್ಷರು, ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಅರ್ಕೇಶ್ವರನಗರ ಬಡಾವಣೆ, ಕೆ.ಆರ್. ನಗರ ಟೌನ್, ಮೈಸೂರು ಜಿಲ್ಲೆ. ಪಿನ್- 571602 ಈ ವಿಳಾಸಕ್ಕೆ ಜೂನ್ 30 ರೊಳಗೆ ತಲಪುವಂತೆ ಕಳುಹಿಸಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಮೊ. 9449680583 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.