ಮಡಿಕೇರಿ, ಏ. 18 : ಇತ್ತೀಚೆಗೆ ಕಾಶ್ಮೀರದ ಮೆಡಾವೊ ಎಂಬಲ್ಲಿ ಆಸೀಫಾಬಾನು ಎಂಬ ಬಾಲಕಿಯನ್ನು ಅಪಹರಿಸಿ ದೇವಾಲಯದ ಒಳಗೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೈದು ಕಾಡಿಗೆ ಎಸೆದಿರುವದು ಹೀನಾಯ ಕೃತ್ಯವಾಗಿದ್ದು, ಕೊಡಗು ಜಿಲ್ಲಾ ಜನತಾದಳ ಪಕ್ಷ ಖಂಡಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿ ಇಂತಹ ಕೆಲಸ ಮಾಡಿರುವದು ದೇಶದ ಅಧಿಕಾರಿಗಳು ತಲೆತಗ್ಗಿಸುವಂತೆ ಮಾಡಿದೆ. ಇದರಿಂದ ಜನರು ಸಾರ್ವಜನಿಕರಿಗೆ ಕಾನೂನಿನ ಮೇಲೆ ನಂಬಿಕೆ ಇಲ್ಲದಂತೆ ಆಗಿದೆ. ಕಾನೂನು ತಿಳಿದಿರುವ ಅಧಿಕಾರಿಗಳೇ ಇಂತಹ ಹೀನಾಯ ಕೆಲಸ ಮಾಡಿರುವದರಿಂದ ಇಂತಹ ವ್ಯಕ್ತಿಗಳನ್ನು ಮುಲಾಜಿಲ್ಲದೆ ರಕ್ಷಣೆ ನೀಡದೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕಾಗಿ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆಗ್ರಹಿಸಿದ್ದಾರೆ.