ಮಡಿಕೇರಿ, 18: ರಾಜ್ಯ ವಿಧಾನಸಭೆಗೆ ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳಿಸಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಇತರೆ ಎಲ್ಲಾ ಪಕ್ಷಗಳಿಗಿಂತಲೂ ತುಸು ಮುಂಚಿತ ವಾಗಿಯೇ ಸಿದ್ಧತೆ ಆರಂಭಿಸಿತ್ತು.ಎರಡು ಕ್ಷೇತ್ರಗಳಿಗೆ ಸಂಬಂಧಿಸಿ ದಂತೆ ಹಾಲಿ ಶಾಸಕರುಗಳೇ ಅಭ್ಯರ್ಥಿಗಳಾಗಲಿದ್ದಾರೆ ಎಂಬ ದಟ್ಟಮಾತಿನ ನಡುವೆಯೂ ಇತರ ಆಕಾಂಕ್ಷಿಗಳೂ ಟಿಕೆಟ್‍ಗಾಗಿ ಪ್ರಯತ್ನ ನಡೆಸುತ್ತಿದ್ದುದು ಬಹುಶಃ ಎಲ್ಲರಿಗೂ ಗೊತ್ತು. ಚುನಾವಣೆ ಘೋಷಣೆಗೆ ಹಲವಾರು ತಿಂಗಳುಗಳ ಮುಂಚಿತ ವಾಗಿ ಅಲ್ಲಲ್ಲಿ ನಡೆದಿರುವ ಬಿಜೆಪಿ ಸಭೆಗಳಲ್ಲಿಯೂ ಮುಂದಿನ ಆಡಳಿತ ಬಿಜೆಪಿಯೆದ್ದೇ ಎಂಬಂತೆ ಹಲವಾರು ಪ್ರಮುಖರು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಹಾಲಿ ಶಾಸಕರುಗಳೂ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿಯ ವಿರುದ್ಧ ಹರಿಹಾಯುತ್ತಿದ್ದರು.
ಆದರೆ ಆಗಿನ ಸನ್ನಿವೇಶವೇ ಬೇರೆ... ಈಗಿನ ವಸ್ತುಸ್ಥಿತಿಯೇ ಬೇರೆ ಎಂಬಂತಿದೆ ಬಿಜೆಪಿ ಪಾಳಯದ ನಡೆ... ಇದೀಗ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೂ ಚಾಲನೆ ದೊರೆತಿದೆ. ಈ ನಡುವೆ ಪಕ್ಷದ ಹೈಕಮಾಂಡ್ ಟಿಕೆಟ್ ವಿಚಾರದಲ್ಲಿ ಕಟ್ಟುನಿಟ್ಟಿನ ಧೋರಣೆ ಅನುಸರಿಸಿದ ಪರಿಣಾಮ ಎಲ್ಲವೂ ಇನ್ನೂ ನಿಗೂಢವಾಗಿಯೇ ಇದೆ.
ಬಿಜೆಪಿ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ಲಭ್ಯವಾಗಿದ್ದು, ಅವರಿಗೆ ‘ಬಿ’ ಫಾರಂ ಕೂಡ ದೊರೆತಿದೆ. ಆದರೆ ತೀವ್ರ ಕುತೂಹಲ
(ಮೊದಲ ಪುಟದಿಂದ) ಕೆರಳಿಸಿರುವ ವೀರಾಜಪೇಟೆ ಕ್ಷೇತ್ರಕ್ಕೆ ಪಕ್ಷ ಪ್ರಕಟಿಸಿರುವ ಎರಡು ಪಟ್ಟಿಯಲ್ಲೂ ಅಭ್ಯರ್ಥಿಯ ಹೆಸರನ್ನು ಅಂತಿಮ ಗೊಳಿಸಲಾಗಿಲ್ಲ. ಮಾಜಿ ಸ್ಪೀಕರ್, ಹಾಲಿ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಅವರ ಬೆಂಬಲಿಗರಲ್ಲಿ ಇದು ಇನ್ನೂ ಪ್ರಶ್ನಾರ್ಹವಾಗಿಯೇ ಮುಂದುವರೆ ದಿದ್ದು, ಕಾರ್ಯಕರ್ತರು ಏನೂ ತೋಚದೆ ಸುಮ್ಮನಿರುವಂತಿದೆ.
ಇತ್ತ ಮಡಿಕೇರಿ ಕ್ಷೇತ್ರಕ್ಕೆ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ದೊರೆತು ‘ಬಿ’ ಫಾರಂ ಕೂಡ ಲಭ್ಯವಾಗಿದೆ ಯಾದರೂ ಇನ್ನೂ ಪ್ರಚಾರದ ಸಂಚಲನ ಆರಂಭವಾದಂತಿಲ್ಲ.
(ಮೊದಲ ಪುಟದಿಂದ) ಕೆರಳಿಸಿರುವ ವೀರಾಜಪೇಟೆ ಕ್ಷೇತ್ರಕ್ಕೆ ಪಕ್ಷ ಪ್ರಕಟಿಸಿರುವ ಎರಡು ಪಟ್ಟಿಯಲ್ಲೂ ಅಭ್ಯರ್ಥಿಯ ಹೆಸರನ್ನು ಅಂತಿಮ ಗೊಳಿಸಲಾಗಿಲ್ಲ. ಮಾಜಿ ಸ್ಪೀಕರ್, ಹಾಲಿ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಅವರ ಬೆಂಬಲಿಗರಲ್ಲಿ ಇದು ಇನ್ನೂ ಪ್ರಶ್ನಾರ್ಹವಾಗಿಯೇ ಮುಂದುವರೆ ದಿದ್ದು, ಕಾರ್ಯಕರ್ತರು ಏನೂ ತೋಚದೆ ಸುಮ್ಮನಿರುವಂತಿದೆ.
ಇತ್ತ ಮಡಿಕೇರಿ ಕ್ಷೇತ್ರಕ್ಕೆ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ದೊರೆತು ‘ಬಿ’ ಫಾರಂ ಕೂಡ ಲಭ್ಯವಾಗಿದೆ ಯಾದರೂ ಇನ್ನೂ ಪ್ರಚಾರದ ಸಂಚಲನ ಆರಂಭವಾದಂತಿಲ್ಲ. ಘೋಷಣೆಯಾಗಿರುತ್ತಿತ್ತು. ಮಾತ್ರವಲ್ಲದೆ ಚುನಾವಣೆಗೆ ಅಧಿಕೃತವಾಗಿ ಘೋಷಣೆಯಾಗುವ ವೇಳೆಯಲ್ಲಿ ಪಕ್ಷ ಹಾಗೂ ಕಾರ್ಯಕರ್ತರು ಒಂದೆರಡು ಸುತ್ತಿನ ಪ್ರಚಾರವನ್ನೂ ಪೂರೈಸಿರುತ್ತಿದ್ದರು. ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಗ್ರಾ.ಪಂ. ಮಟ್ಟದಿಂದ ಹಿಡಿದು ಎಲ್ಲಾ ಚುನಾವಣೆಗಳನ್ನೂ ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುತ್ತಿತ್ತು. ಆದರೆ 2018ರ ರಾಜ್ಯ ವಿಧಾನಸಭಾ ಚುನಾವಣೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಕಂಡುಬರುತ್ತಿದೆ. ಇನ್ನು ಮುಂದಿನ ಬೆಳವಣಿಗೆಯ ಕುರಿತು ರಾಜಕೀಯಾಸಕ್ತರು ತೀವ್ರ ಕುತೂಹಲದಿಂದಿದ್ದಾರೆ.