ಸೋಮವಾರಪೇಟೆ, ಏ.18: ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀನವಗಣಪತಿ ದೇವಾಲಯಕ್ಕೆ ಹಣಕಾಸಿನ ಕೊರತೆ ಎದುರಾಗಿದ್ದು, ಕಳೆದ 4 ವರ್ಷಗಳಿಂದ ಆಮೆವೇಗದಲ್ಲಿ ನಡೆಯುತ್ತಿದೆ.

ಸುಮಾರು 12 ಲಕ್ಷ ಅಂದಾಜು ಮೊತ್ತದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಗ್ರಾಮಸ್ಥರ ಸಹಕಾರದಿಂದ ಆಡಳಿತ ಮಂಡಳಿ ಮುಂದಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ದೊರಕದ ಹಿನ್ನೆಲೆ ಇದೀಗ ಸಾರ್ವಜನಿಕ ಭಕ್ತಾದಿಗಳಿಂದ ಧನ ಸಹಾಯ ಸಂಗ್ರಹಿಸಲು ಆಡಳಿತ ಮಂಡಳಿ ಮುಂದಾಗಿದೆ.ಸೋಮವಾರಪೇಟೆ, ಏ.18: ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀನವಗಣಪತಿ ದೇವಾಲಯಕ್ಕೆ ಹಣಕಾಸಿನ ಕೊರತೆ ಎದುರಾಗಿದ್ದು, ಕಳೆದ 4 ವರ್ಷಗಳಿಂದ ಆಮೆವೇಗದಲ್ಲಿ ನಡೆಯುತ್ತಿದೆ.

ಸುಮಾರು 12 ಲಕ್ಷ ಅಂದಾಜು ಮೊತ್ತದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಗ್ರಾಮಸ್ಥರ ಸಹಕಾರದಿಂದ ಆಡಳಿತ ಮಂಡಳಿ ಮುಂದಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ದೊರಕದ ಹಿನ್ನೆಲೆ ಇದೀಗ ಸಾರ್ವಜನಿಕ ಭಕ್ತಾದಿಗಳಿಂದ ಧನ ಸಹಾಯ ಸಂಗ್ರಹಿಸಲು ಆಡಳಿತ ಮಂಡಳಿ ಮುಂದಾಗಿದೆ.ರಾಜೇಶ್, ಖಜಾಂಚಿಯಾಗಿ ಡಿ.ವಿ. ಪುಟ್ಟರಾಜು ಸೇರಿದಂತೆ ಸಮಿತಿ ಪದಾಧಿಕಾರಿಗಳು ದೇವಾಲಯ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ.

ಈಗಾಗಲೇ ಶೇ.40 ರಷ್ಟು ಕಾಮಗಾರಿ ಮುಗಿದಿದ್ದು, ಇನ್ನೂ ಶೇ. 60 ರಷ್ಟು ಕಾಮಗಾರಿ ಬಾಕಿ ಉಳಿದಿದೆ. ದೇವಾಲಯ ನಿರ್ಮಾಣಕ್ಕೆ ಸಾರ್ವಜನಿಕ ದಾನಿಗಳು ಸಹಾಯ ಧನ ಸಹಾಯ ನೀಡಿದರೆ ಶೀಘ್ರದಲ್ಲೇ ನೂತನ ದೇವಾಲಯ ನಿರ್ಮಾಣಗೊಳ್ಳಲಿದೆ. ಈ ಕಾರ್ಯಕ್ಕೆ ಈಗಾಗಲೇ ಹಲವಷ್ಟು ಮಂದಿ ಕೈಜೋಡಿಸಿದ್ದು, ಇನ್ನೂ ಲಕ್ಷಾಂತರ ರೂಪಾಯಿಗಳ ಅವಶ್ಯಕತೆಯಿದೆ. ದೇವಾಲಯಕ್ಕೆ ಧನ ಸಹಾಯ ನೀಡುವವರು ಶ್ರೀ ನವಗಣಪತಿ ಯುವಕರ ಸಂಘ, ಜಂಟಿ ಖಾತೆ ಸಂಖ್ಯೆ: 1382500101867401, ಐಎಫ್‍ಎಸ್‍ಸಿ ಸಂಖ್ಯೆ:ಕೆಎಆರ್‍ಬಿ 0000138, ಕರ್ನಾಟಕ ಬ್ಯಾಂಕ್, ಸೋಮವಾರ ಪೇಟೆ ಇಲ್ಲಿಗೆ ಕಳುಹಿಸಬಹುದಾಗಿದೆ. ಮಾಹಿತಿಗೆ ಮೊ: 7760385492 ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ಅಧ್ಯಕ್ಷ ಪುಟ್ಟರಾಜು ಮನವಿ ಮಾಡಿದ್ದಾರೆ.