ಮಡಿಕೇರಿ, ಏ. 18: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ನಡುವೆ ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ಪೊನ್ನಚನ ತಂಡ ಪ್ರಿಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಕಳೆದ ಬಾರಿಯ ರನ್ನರ್ ಅಪ್ ಪರ್ಲಕೋಟಿ ತಂಡವನ್ನು ಮಣಿಸುವ ಮೂಲಕ ಪೊನ್ನಚನ ಮುನ್ನಡೆ ಸಾಧಿಸಿದೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಕೂಡಕಂಡಿ ತಂಡ 5 ವಿಕೆಟ್ಗೆ 81 ರನ್ ಗಳಿಸಿದರೆ, ಕರ್ಕರನ ತಂಡ 66 ರನ್ ಗಳಿಸಿ 15 ರನ್ಗಳ ಅಂತರದಿಂದ ಸೊಲನುಭವಿಸಿತು. ತೇಲಬೈಲು ತಂಡ 5 ವಿಕೆಟ್ಗೆ 38 ರನ್ ಗಳಿಸಿದರೆ, ಪಾಣತ್ತಲೆ ತಂಡ 2 ವಿಕೆಟ್ ಕಳೆದುಕೊಂಡು 8 ವಿಕೆಟ್ಗಳ ಜಯ ಸಂಪಾದಿಸಿತು. ಪರ್ಲಕೋಟಿ ತಂಡ 8 ವಿಕೆಟ್ಗೆ 60 ರನ್ ಗಳಿಸಿದರೆ, ಕಡ್ಯದ ತಂಡ 2 ವಿಕೆಟ್ ಕಳೆದುಕೊಂಡು 21 ರನ್ಗಳ ಅಂತರದಿಂದ ಸೋಲನುಭವಿಸಿತು.
ಪೊಡನೊಳನ ತಂಡ 2 ವಿಕೆಟ್ಗೆ 147 ರನ್ಗಳ ದಾಖಲೆ ಮೊತ್ತವನ್ನು ಕಲೆ ಹಾಕಿದರೆ, ಉತ್ತರವಾಗಿ ಆಡಿದ ತೊತ್ತಿಯನ ‘ಬಿ’ ತಂಡ 7 ವಿಕೆಟ್ಗೆ 18 ರನ್ ಮಾತ್ರ ಗಳಿಸಿ 129 ರನ್ಗಳ ಭಾರೀ ಅಂತರದಿಂದ ಸೋಲು ಕಂಡಿತು.
ಈ ಬಾರಿಯ ಪಂದ್ಯಾವಳಿಯಲ್ಲಿ ಇದು ಅತ್ಯಧಿಕ ಮೊತ್ತ ಹಾಗೂ ಭಾರೀ ಅಂತರದ ಸೋಲಾಗಿದೆ. ಪೊನ್ನಚನ ಹಾಗೂ ಪಾಣತ್ತಲೆ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನಚನ 6 ವಿಕೆಟ್ಗೆ 64 ರನ್ ಗಳಿಸಿದರೆ, ಪಾಣತ್ತಲೆ ತಂಡ 3 ವಿಕೆಟ್ಗೆ 34 ರನ್ ಮಾತ್ರ ಗಳಿಸಿ 30 ರನ್ಗಳ ಅಂತರದಿಂದ ಸೊಲನುಭವಿಸಿತು.
ಬೋಳನ ತಂಡ 8 ವಿಕೆಟ್ಗೆ 46 ರನ್ ಗಳಿಸಿದರೆ, ಪಡ್ಪುಮನೆ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಸೂರ್ತಲೆ ತಂಡ 7 ವಿಕೆಟ್ಗೆ 49 ರನ್ ಗಳಿಸಿದರೆ, ಸೆಟ್ಟೆಜ್ಜನ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಜಯಗಳಿಸಿತು. ಕೊಂಪುಳಿರ ತಂಡ 4 ವಿಕೆಟ್ಗೆ 63 ರನ್ ಗಳಿಸಿದರೆ, ಕುಂಬಗೌಡನ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಲ್ಲಿಸಿತು.
ಪೊಡನೊಳನ ತಂಡ 7 ವಿಕೆಟ್ಗೆ 46 ರನ್ ಗಳಿಸಿದರೆ, ಪಡ್ಪುಮನೆ ತಂಡ 4 ವಿಕೆಟ್ ನಷ್ಟದಲ್ಲಿ ಜಯಗಳಿಸಿ ಪರ್ಲಕೋಟಿ ಹಾಗೂ ಪೊನ್ನಚನ ತಂಡಗಳ ಮತ್ತೊಂದು ಪಂದ್ಯದಲ್ಲಿ ಪರ್ಲಕೋಟಿ ತಂಡ 6 ವಿಕೆಟ್ಗೆ 40 ರನ್ ಗಳಿಸಿದರೆ, ಪೊನ್ನಚನ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಕೂಡಕಂಡಿ ತಂಡ 3 ವಿಕೆಟ್ಗೆ 97 ರನ್ ಗಳಿಸಿದರೆ, ತೋರೇರ ತಂಡ 6 ವಿಕೆಟ್ಗೆ 45 ರನ್ ಮಾತ್ರ ಗಳಿಸಿ 52 ರನ್ಗಳ ಅಂತರದಿಂದ ಸೋಲನುಭವಿಸಿತು.