ಮಡಿಕೇರಿ, ಏ. 18: ಸೂರ್ಲಬ್ಬಿ ನಾಡಿನ ಐತಿಹಾಸಿಕ ಶ್ರೀಕಾಳತಮ್ಮೆ (ಮಹಾಕಾಳಿ) ಹಾಗೂ ಕ್ಷೇತ್ರಪಾಲ ದೇವರ ವಾರ್ಷಿಕ ಉತ್ಸವ ಇಂದು ಭಂಡಾರವನ್ನು ತಕ್ಕರ ಮನೆಯಲ್ಲಿ ತಂದಿರಿಸುವದರೊಂದಿಗೆ ಮುಕ್ತಾಯಗೊಂಡಿತು.

ತಾ. 6ರಂದು ಹಬ್ಬದ ಕಟ್ಟು ಬೀಳುವದರೊಂದಿಗೆ 10ರಂದು ವಾರ್ಷಿಕ ಪಟ್ಟಣಿ ಹಬ್ಬ ಆಚರಣೆ ಮೂಲಕ, ದೇವಾಲಯಕ್ಕೆ ತಕ್‍ಕರ ಮನೆಯಿಂದ ಭಂಡಾರ ತಂದು ಪೂಜೆಯೊಂದಿಗೆ ನಿತ್ಯವೂ ಇರುಬೊಳಕಾಟ್ ನೆರವೇರಿತು.

ತಾ.10ರಂದು ದೇವರ ಗುಂಡಿಯಲ್ಲಿ ಮೀನಿಗೆ ಅಕ್ಕಿ ಹಾಕುವ ಮೂಲಕ ಜಳಕದೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ದೊರೆಯಿತು. ತಾ. 16ರಂದು ವಿಶೇಷಪೂಜೆ, ತಾ. 17ರಂದು ದೊಡ್ಡ ಹಬ್ಬ, ಹರಕೆ ಕಾಣಿಕೆ, ‘ತೆಂಗೆಪೋರ್’ ಸೇವೆಗಳು ಜರುಗಿತು. ರಾತ್ರಿ ಶ್ರೀಕ್ಷೇತ್ರ ಪಾಲನಿಗೆ ಬಲಿಸೇವೆಯೊಂದಿಗೆ ಇಂದು ಶತಶತಮಾನದ ಐತಿಹಾಸಿಕ ಖಡ್ಗಮೆರವಣಿಗೆಯೊಂದಿಗೆ ನಾಡಿನವರು ತಕ್ಕರ ಮನೆಯಲ್ಲಿ ಭಂಡಾರ ತಂದೊಪ್ಪಿಸುವ ಮೂಲಕ ವಾರ್ಷಿಕ ಉತ್ಸವಕ್ಕೆ ನಾಂದಿ ಹಾಡಲಾಯಿತು.