*ಸಿದ್ದಾಪುರ, ಏ. 19: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ವಿಎಸ್‍ಎಸ್‍ಎನ್ ಸಹಕಾರ ಸಂಘದ ಗುಡ್ಡೆಹೊಸೂರು ಶಾಖೆಯಲ್ಲಿ ನಡೆಸಿದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಇಂದು ಕುಶಾಲನಗರ ನ್ಯಾಯಾಲಯದಲ್ಲಿ ಶರಣಾಗಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಗುಡ್ಡೆಹೊಸೂರು ಶಾಖೆಯ ಉಸ್ತುವಾರಿಯಾಗಿದ್ದ ಲುಶ್ವಪತಿ ಎಂಬಾತ ಗೊಬ್ಬರ ಸೇರಿದಂಎ ಇತರ ಕೃಷಿ ಪರಿಕರಗಳ ಹಣದಲ್ಲಿ ಸುಮಾರು ರೂ. 7 ಲಕ್ಷದಷ್ಟು ಅವ್ಯವಹಾರವೆಸಗಿದ್ದು, ಮಹಾಸಭೆಯಲ್ಲಿ ಚರ್ಚೆಯಾಗಿ ಪೊಲೀಸ್ ದೂರು ನೀಡಲಾಗಿತ್ತು. ಆದರೆ ಲುಶ್ವಪತಿ ತಲೆಮರೆಸಿಕೊಂಡಿದ್ದರು. ಇದೀಗ ಇಂದು ದಿಢೀರಾಗಿ ಆಗಮಿಸಿ, ನ್ಯಾಯಾಲಯದಲ್ಲಿ ಶರಣಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆದರೆ ಆತನ ಮೇಲೆ ಇನ್ನಷ್ಟು ಅವ್ಯವಹಾರದ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.